ನವದೆಹಲಿ: 2024-25ರ ಆರ್ಥಿಕ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ವಿವಿಧ ಯೋಜನೆಗಳಿಗೆ ₹51,463 ಕೋಟಿ ಮೊತ್ತದ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ಕೋರಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರದ ವೆಚ್ಚ ₹6.78 ಲಕ್ಷ ಕೋಟಿಯಾಗಿದೆ.
ಈ ಪೈಕಿ ₹6.27 ಲಕ್ಷ ಕೋಟಿ ಉಳಿತಾಯ ಮತ್ತು ಪಾವತಿಗೆ ಬಳಸಲಾಗಿದೆ. ಇನ್ನೂ ₹51,462 ಕೋಟಿ ಪಾವತಿಸಬೇಕಿದೆ.
ಹೆಚ್ಚುವರಿ ವೆಚ್ಚದಲ್ಲಿ ಪ್ರಮುಖವಾಗಿ ರಸಗೊಬ್ಬರಕ್ಕೆ ₹12 ಸಾವಿರ ಕೋಟಿ, ಸರ್ಕಾರಿ ಉದ್ಯೋಗಿಗಳ ಪಿಂಚಣಿಗೆ ₹13,449 ಕೋಟಿ, ದೂರಸಂಪರ್ಕ ಇಲಾಖೆಗೆ ₹5,332 ಕೋಟಿ ವೆಚ್ಚ ಮಾಡಬೇಕಿದೆ ಎಂದು ಸರ್ಕಾರ ತಿಳಿಸಿದೆ.