ಕಾಸರಗೋಡು: ಜಿಲ್ಲೆಯ ಎಲ್ಲಾ 41 ಸ್ಥಳೀಯಾಡಳಿತ ಸಂಸ್ಥೆಗಳ ಶಾಲೆಗಳನ್ನು ಆರು ಹಂತಗಳಲ್ಲಿ ಇ-ತ್ಯಾಜ್ಯ ಮುಕ್ತಗೊಳಿಸಲಾಗಿದೆ. ಪ್ರಯೋಗಾಲಯಗಳು ಮತ್ತು ತರಗತಿ ಕೋಣೆಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ರಾಶಿಯಾಗಿ ಬಿದ್ದಿರುವುದರಿಂದ ವಿದ್ಯಾರ್ಥಿಗಳಿಗೆ ಅಪಾಯವಾಗುತ್ತಿದ್ದ ಪರಿಸ್ಥಿತಿಯಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು.
ಶಾಲಾ ಮಟ್ಟದ ಸಮಿತಿಯು ಪರಿಶೀಲಿಸಿ ಇ-ತ್ಯಾಜ್ಯ ಎಂದು ದೃಢಪಡಿಸಿದ ನಂತರ ಸಂಗ್ರಹಿಸಿದ ವಸ್ತುಗಳನ್ನು ಕೈಟ್‍ನ ಪೋರ್ಟಲ್‍ಗೆ ಅಪ್‍ಲೋಡ್ ಮಾಡಲಾಯಿತು. ಪ್ರತಿ ಪಂಚಾಯತ್‍ನಲ್ಲಿ ಗೊತ್ತುಪಡಿಸಿದ ಸಂಗ್ರಹಣಾ ಕೇಂದ್ರಕ್ಕೆ ಇ-ತ್ಯಾಜ್ಯವನ್ನು ತೆಗೆದುಕೊಂಡು ಹೋಗುವ ಮೂಲಕ ವಿಲೇವಾರಿಗೊಳಿಸಲಾಗಿದೆ. ಪಂಚಾಯತ್-ನಗರಸಭಾ ಅಧ್ಯಕ್ಷರು ಮತ್ತು ಮುಖ್ಯೋಪಾಧ್ಯಾಯರು ಜಂಟಿಯಾಗಿ ಪ್ರತಿ ಹಂತಕ್ಕೂ ಚಾಲನೆ ನೀಡಿದ್ದರು.
ಈ ಹಣಕಾಸು ವರ್ಷದಲ್ಲಿ ಕ್ಲೀನ್ ಕೇರಳ ಕಂಪನಿಯು ವಿವಿಧ ಸಂಸ್ಥೆಗಳಿಂದ 59 ಟನ್ ಇ-ತ್ಯಾಜ್ಯವನ್ನು ಸಂಗ್ರಹಿಸಿದೆ. ಕ್ಲೀನ್ ಕೇರಳ ಕಂಪನಿಯು ನೀ;ಏಶ್ವರ ತೈಕ್ಕಡಪ್ಪುರಂನಲ್ಲಿ ಇ-ತ್ಯಾಜ್ಯ ಸಂಗ್ರಹಕ್ಕಾಗಿಯೇ ವಿಶೇಷ ಗೋದಾಮನ್ನು ಸ್ಥಾಪಿಸಿದೆ. ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ಮಾತನಾಡಿ, ಮುಂಬರುವ ಹಣಕಾಸು ವರ್ಷದಲ್ಲಿ ಜಿಲ್ಲೆಯ ಹಸಿರು ಕ್ರಿಯಾ ಸೇನೆಯು ಮನೆಗಳಿಂದ ಇ-ತ್ಯಾಜ್ಯವನ್ನು ಸಂಗ್ರಹಿಸಲಿದ್ದು, ಕ್ಲೀನ್ ಕೇರಳ ಕಂಪನಿಯು ಮನೆಗಳಿಗೆ ಮಿತ ವೆಚ್ಚದಲ್ಲಿ ಅದನ್ನು ವಿಲೇವಾರಿಗೊಳಿಸಲಿದೆ.