ನವದೆಹಲಿ: ಚೀನಾದಿಂದ ಭಾರತಕ್ಕೆ ಅಗ್ಗದ ದರದಲ್ಲಿ ಆಮದಾಗುತ್ತಿದ್ದ ಐದು ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರವು, ಹೆಚ್ಚುವರಿ ತೆರಿಗೆ ವಿಧಿಸಿದೆ.
ಸಾಫ್ಟ್ ಫೆರೈಟ್ ಕೋರೆಸ್, ವ್ಯಾಕುಮ್ ಫ್ಲಾಸ್ಕ್, ಅಲ್ಯೂಮಿನಿಯಂ ಫಾಯಿಲ್ (ಹಾಳೆ), ಟ್ರೈಕ್ಲೋರೊ ಐಸೋಸೈನೂರಿಕ್ ಆಮ್ಲ ಮತ್ತು ಪಿವಿಸಿ ಪೇಸ್ಟ್ ರೆಸಿನ್ ಉತ್ಪನ್ನಗಳ ಆಮದು ಮೇಲೆ ಈ ತೆರಿಗೆ ವಿಧಿಸಲಾಗಿದೆ.
ಭಾರತದಲ್ಲಿ ಈ ಉತ್ಪನ್ನಗಳು ಸಹಜ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಇದರಿಂದ ದೇಶದ ಮಾರಾಟಗಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ಮಾರಾಟಗಾರರ ರಕ್ಷಣೆ ದೃಷ್ಟಿಯಿಂದ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.