ಕಾಸರಗೋಡು: ವಿದೇಶದಲ್ಲಿ ಉದ್ಯೋಗದ ಭರವಸೆ ನೀಡಿ ವೆಳ್ಳರಿಕುಂಡು ನಿವಾಸಿಯಿಂದ 5ಲಕ್ಷ ರೂ. ಪಡೆದು ವಂಚಿಸಿದ ಪ್ರರಕಣದ ಆರೋಪಿ, ಕನ್ಯಾಕುಮಾರಿ ಮಾರ್ತಾಂಡಂ ನಿವಾಸಿ ಆರ್. ಸತೀಶ್ ಎಂಬಾತನನ್ನು ವೆಳ್ಳರಿಕುಂಡು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೇರೊಂದು ಸಮನ ಪ್ರಕರಣಕ್ಕೆ ಸಂಬಂಧಿಸಿ ಕೋಯಿಕ್ಕೋಡು ಕಾರಗೃಹದಲ್ಲಿ ನ್ಯಾಯಾಂಗಬಂಧನದಲ್ಲಿದ್ದ ಆರೋಪಿಯನ್ನು ಪ್ರೊಡಕ್ಷನ್ ವಾರಂಟ್ ಮೂಲಕ ಎಸ್.ಐ ರಾಜನ್ ನೇತೃತ್ವದ ಪೊಲೀಸರ ತಂಡ ವಶಕ್ಕೆ ತೆಗೆದುಕೊಂಡಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿರುವುದಗಿ ಪೊಲೀಸರು ತಿಳಿಸಿದ್ದಾರೆ.