HEALTH TIPS

ಎಲ್‌ಐಸಿಯ ಹೊಸ ಜೀವನ್ ಶಾಂತಿ ಯೋಜನೆ: ಒಮ್ಮೆ ಹೂಡಿಕೆ ಮಾಡಿ ಪ್ರತಿ ವರ್ಷ 6 ಲಕ್ಷ ರೂಪಾಯಿ ಪಡೆಯುವುದು ಹೇಗೆ?

Top Post Ad

Click to join Samarasasudhi Official Whatsapp Group

Qries

ಭಾರತದ ವಿಮಾ ದೈತ್ಯ ಸಂಸ್ಥೆಯಾದ ಭಾರತೀಯ ಜೀವ ವಿಮಾ ಸಂಸ್ಥೆ (ಎಲ್‌ಐಸಿ) ಎಲ್ಲ ವಯಸ್ಸಿನವರಿಗೆ ಹಲವಾರು ವಿಶೇಷ ಯೋಜನೆಗಳನ್ನು ಹೊಂದಿದೆ. ಇದು ಮಾಸಿಕ ಹೂಡಿಕೆಯಾಗಿರಲಿ ಅಥವಾ ಮಾಸಿಕ ಪಿಂಚಣಿ ಯೋಜನೆಯಾಗಿರಲಿ, ಎಲ್‌ಐಸಿ ಹಲವು ಆಯ್ಕೆಗಳನ್ನು ಹೊಂದಿದೆ.

ಹೌದು, ನೀವು ಒಂದು ಬಾರಿ ಹೂಡಿಕೆ ಮಾಡಿ, ಬಳಿಕ ಮಾಸಿಕ ಅಥವಾ ವಾರ್ಷಿಕ ಪಿಂಚಣಿ ಗಳಿಸಲು ಬಯಸಿದರೆ, ನೀವು ಎಲ್‌ಐಸಿಯ ಜೀವನ ಶಾಂತಿ ಯೋಜನೆ ಆಯ್ಕೆ ಮಾಡಬಹುದಾಗಿದೆ.

ಇದು ವರ್ಷಾಶನ ಯೋಜನೆಯಾಗಿದೆ.ನಿಮ್ಮ ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ಪರಿಚಯ ಮಾಡಲಾಗಿದೆ.

ಎಲ್‌ಐಸಿ ಹೊಸ ಜೀವನ್ ಶಾಂತಿ ಯೋಜನೆ

ಈ ಯೋಜನೆಯ ಪ್ರಮುಳವಾದ ಪ್ರಯೋಜನವೆಂದರೆ ಇದರಲ್ಲಿ ನೀವು ನಿರಂತರವಾಗಿ ಒಂದು ಬಾರಿ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ತಿಂಗಳು, ಮೂರುತಿಂಗಳು,ನಾಲ್ಕು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಹೊಡಿಕೆಯನ್ನು ಮಾಡಬಹುದು.

ಹೂಡಿಕೆ ಮಾಡಬಹುದು ಹೇಗೆ..?

ನೀವು ಈ ಯೋಜನೆಯ ಮೂಲಕ ಸಕಾಲಿಕವಾಗಿ ಆದಾಯವನ್ನು ಗಳಿಸಬಹುದು. ಇದರಲ್ಲಿ ಅನೇಕ ಜನರು ಹೂಡಿಕೆ ಮಾಡಲು ಬಯಸುತ್ತಾರೆ. ಆದರೆ ಅಪಾಯಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. LIC ಈ ಯೋಜನೆಯನ್ನು ಅಪಾಯ ಮುಕ್ತವಾಗಿರಲು ಎಂದು ವಿನ್ಯಾಸಗೊಳಿಸಿದೆ. ಉತ್ತಮ ಆದಾಯ ಸಹ ಸಿಗುತ್ತದೆ.ಅದಕ್ಕಾಗಿಯೇ ನೀವು ಈ ವಿಮಾ ಯೋಜನೆ ಹೂಡಿಕೆ ಮಾಡಲು ಉತ್ತಮಾರ್ಗವಾಗಿದೆ.

ಜೀವನ ಶಾಂತಿಗೆ ವಯಸ್ಸಿನ ಮಿತಿ

ಎಲ್‌ಐಸಿ ಪಾಲಿಸಿಯು 30 ರಿಂದ 79 ವರ್ಷ ವಯಸ್ಸಿನ ಮಿತಿಯನ್ನು ಹೊಂದಿದೆ. ಇದು ಯಾವುದೇ ಅಪಾಯದ ಕವರೇಜ್‌ ಅನ್ನು ನೀಡುವುದಿಲ್ಲ. ಆದರೆ ಅದರ ಪ್ರಯೋಜನಗಳು ಬಹಳಷ್ಟಿದೆ. ಉತ್ತಮ ಬಡ್ಡಿದರ ಪಡೆಯಬಹುದಾಗಿದೆ. ಈ ಎಲ್‌ಐಸಿ ಯೋಜನೆಯನ್ನು ಖರೀದಿಸಲು ಕಂಪನಿಯು ಎರಡು ಆಯ್ಕೆಗಳನ್ನು ಒದಗಿಸಿದೆ.

ಮೊದಲ ಆಯ್ಕೆಯು ಸಿಂಗಲ್ ಲೈಫ್ ವರ್ಷಾಶನವಾಗಿದೆ. ಎರಡನೆಯದು ಜಂಟಿ ಜೀವನ ವರ್ಷಾಶನವಾಗಿದೆ. ಇದರರ್ಥ ನೀವು ನಿಮಗಾಗಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು ಅಥವಾ ನೀವು ಬಯಸಿದಲ್ಲಿ ಬೇರೆಯವರೊಂದಿಗೆ ಜೊತೆಯಾಗಿ ಯೋಜನೆಯನ್ನು ಆರಿಸಿಕೊಳ್ಳಬಹುದು.

ಈ LIC ಯೋಜನೆಯು ವಿವಿಧ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಉದಾಹರಣೆಗೆ, ನಿರ್ದಿಷ್ಟ ಹೂಡಿಕೆ ಮೊತ್ತಕ್ಕೆ ನೀವು ಎಷ್ಟು ಆದಾಯವನ್ನು ಪಡೆಯಬಹುದು ಎಂಬುದನ್ನು ಈ ಕೆಳಗಿನಂತೆ ತಿಳಿಯೋಣ ಬನ್ನಿ..

ಮಾಸಿಕ ಹೂಡಿಕೆ: 1,000 ಅಥವಾ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ತ್ರೈಮಾಸಿಕ ಹೂಡಿಕೆ: 3,000 ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ಅರ್ಧ ವಾರ್ಷಿಕ ಹೂಡಿಕೆ: 6,000 ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ.

ವಾರ್ಷಿಕ ಹೂಡಿಕೆ: 12,000 ಹೆಚ್ಚಿನ ಹಣ ಹೂಡಿಕೆ ಮಾಡಿ

6 ಲಕ್ಷ ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?

ನಿಮ್ಮಗೆ ಆರ್ಥಿಕ ಭದ್ರತೆಯನ್ನು ಒದಗಿಸುವ LIC ಯ ಹೊಸ ಜೀವನ ಶಾಂತಿ ಯೋಜನೆಯ ಮೂಲಕ 6 ಲಕ್ಷಗಳನ್ನು ಪಡೆಯಲು, ನೀವು ಈ ಕೆಳಗಿನಂತೆ ಹೂಡಿಕೆ ಮಾಡಬೇಕಾಗುತ್ತದೆ

ವಾರ್ಷಿಕ ಹೂಡಿಕೆ: 38,400 ರಿಂದ 57,600

ತ್ರೈಮಾಸಿಕ ಹೂಡಿಕೆ: 19,200 ರಿಂದ 28,800

ಅರ್ಧ ವಾರ್ಷಿಕ ಹೂಡಿಕೆ: 9,600 ರಿಂದ 14,400

ಮಾಸಿಕ ಹೂಡಿಕೆ: 3,200 ರಿಂದ 4,800 ಹೂಡಿಕೆ ಮಾಡಬೇಕಾಗುತ್ತದೆ.

LIC ಯ ಹೊಸ ಜೀವನ್ ಶಾಂತಿ ಯೋಜನೆಯು ಖಾತರಿಯ ಆದಾಯ ಬಯಸುವವರಿಗೆ ಮುಕ್ತ ಹೂಡಿಕೆಗಳನ್ನು ಬಯಸುವವರಿಗೆ ಸೂಕ್ತವಾಗಿದೆ. ಈ LIC ಯೋಜನೆಯು ಆದಾಯ ಸಿಗುತ್ತದೆ. ನೀವು ತಿಂಗಳು, ಮೂರುತಿಂಗಳು,ನಾಲ್ಕು ತಿಂಗಳು, ಆರು ತಿಂಗಳು ಅಥವಾ ಒಂದು ವರ್ಷಕ್ಕೆ ಹೊಡಿಕೆಯನ್ನು ಮಾಡಬಹುದು. ನಿವೃತ್ತಿಯ ನಂತರ ಆರ್ಥಿಕ ಇದು ಉತ್ತಮ ಮಾರ್ಗವಾಗಿದೆ. ಆದಾಯ ತೆರಿಗೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ವಿನಾಯಿತಿಗಳನ್ನು ಕೂಡಾ ನೀವು ಪಡೆದುಕೊಳ್ಳಬಹುದು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries