ಗಾಜಾಪಟ್ಟಿ: ಇಸ್ರೇಲ್ ಸೇನೆ ಮಂಗಳವಾರ ಬೆಳಗ್ಗೆ ಇಲ್ಲಿನ ಹಮಾಸ್ ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ.
ಯುದ್ಧವಿರಾಮದ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್ ದಾಳಿ ಮುಂದುವರಿಸಿದೆ. ಜನವರಿ 19ರಿಂದ ಇಲ್ಲಿಯವರೆಗೆ ಗಾಜಾದಲ್ಲಿ 66 ಜನರು ಮೃತಪಟ್ಟಿದ್ದಾರೆ.ಹಾಗೂ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಧ್ಯ ಗಾಜಾದ ಅಲ್-ಬಲಾಹ್‌ನಲ್ಲಿ ಮೂರು ಮನೆಗಳು, ಖಾನ್ ಯೂನಿಸ್ ಮತ್ತು ರಫಾದಲ್ಲಿ ಹಮಾಸ್‌ಗೆ ಸೇರಿದ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಗಾಜಾಪಟ್ಟಿಯಲ್ಲಿ 'ಹಮಾಸ್ ಉಗ್ರಗಾಮಿ ಸಂಘಟನೆಗೆ ಸೇರಿದ ನೆಲೆಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಇಸ್ರೇಲ್ ಸೇನೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದೆ.
ನಮ್ಮ ಬಂಧಿತರನ್ನು ಬಿಡುಗಡೆ ಮಾಡಲು ಹಮಾಸ್ ಪದೇ ಪದೇ ನಿರಾಕರಿಸುತ್ತಿದೆ. ಅಮೆರಿಕ ಮಧ್ಯಸ್ಥಗಾರರ ಎಲ್ಲಾ ಪ್ರಸ್ತಾಪಗಳನ್ನು ಹಮಾಸ್ ತಿರಸ್ಕರಿಸಿದ್ದರಿಂದ ಈ ದಾಳಿಗೆ ಆದೇಶಿಸಲಾಗಿದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ.