ಕೊಲಂಬೊ: ಶ್ರೀಲಂಕಾದಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಮೇ 6ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ.
340 ಸ್ಥಳೀಯ ಸಂಸ್ಥೆಗಳಿಗೆ ಕೌನ್ಸಿಲರ್‌ಗಳ ಆಯ್ಕೆ ನಡೆಯಲಿದ್ದು, 1.70 ಕೋಟಿ ಜನರು ಮತ ಚಲಾಯಿಸಲಿದ್ದಾರೆ.
2024ರ ಅಂತ್ಯದಲ್ಲಿ ನಡೆದ ಅಧ್ಯಕ್ಷೀಯ ಮತ್ತು ಸಂಸದೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಧ್ಯಕ್ಷ ಅನುರಾ ಕುಮಾರ ಡಿಸ್ಸನಾಯಕೆ ನೇತೃತ್ವದ ಹಾಲಿ ಸರ್ಕಾರಕ್ಕೆ ಇದು ಮೊದಲ ಚುನಾವಣಾ ಪರೀಕ್ಷೆಯಾಗಿದೆ.
ನಾಲ್ಕು ವರ್ಷದ ಅವಧಿಗೆ ಕೌನ್ಸಿಲರ್‌ಗಳ ಆಯ್ಕೆ ನಡೆಯಲಿದೆ. 2018ರಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು.