ಕುಂಬಳೆ: ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಧರ್ಮದೈವ ಶ್ರೀ ಧೂಮಾವತೀ ಧರ್ಮನೇಮೋತ್ಸವ, ಮುಡಿಪು ಪೂಜೆ, ಪರಿವಾರ ದೈವಗಳಿಗೆ ತಂಬಿಲ ಸೇವೆ ಸೋಮವಾರ ಆರಂಭಗೊಂಡಿದ್ದು, ಮಾ. 7ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯುವುದು.
ಸೋಮವಾರ ಬೆಳಗ್ಗೆ ಗಣಹೋಮ, ಮುಡಿಪು ಪೂಜೆ, ಶ್ರೀ ಪಂಜುರ್ಲಿ ತಂಬಿಲ, ಕಲ್ಲುರ್ಟಿ, ಕೊರತಿ ದೈವಗಳಿಗೆ ಅಗೆಲು ಸೇವೆ ನಡೆಯಿತು.
5ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ 7ರಿಂದ ಭಜನೆ ನಡೆಯಿತು. 6ರಂದು ಬೆಳಗ್ಗೆ 11ಕ್ಕೆ ದೀಪರಾಧನೆ, ಮಧ್ಯಾಹ್ನ 2ರಿಂದ ಸರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ತೊಡಙಳ್, ರಾತ್ರಿ 10ಕ್ಕೆ ಧಾರ್ಮಿಕ ಸಭೆ, 11ಕ್ಕೆ ಶಾರದಾ ಆಟ್ರ್ಸ್ ತಂಡದ ಐಸಿರಿ ಕಲಾವಿದರಿಂದ'ಕಲ್ಜಿಗದ ಮಾಯ್ಕಾರೆ ಪಂಜುರ್ಲಿ'ತುಳು ನಾಟಕ ಪ್ರದರ್ಶನಗೊಳ್ಳುವುದು.
7ರಂದು ಮಧ್ಯಾಹ್ನ 2ಗಂಟೆಗೆ ದೀಪಾರಾಧನೆ, ಸಂಜೆ 4ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮೋತ್ಸವ ನಡೆಯುವುದು.