ಕಾಸರಗೋಡು: ಹವಾಮಾನ ಬದಲಾವಣೆಯನ್ನು ಎದುರಿಸಿ ಪರಿಸರವನ್ನು ಪುನಃಸ್ಥಾಪಿಸಲು ಹಸಿರು ಕೇರಳ ಮಿಷನ್ ಜಾರಿಗೊಳಿಸುವ ಹಸಿರು ದ್ವೀಪ ಯೋಜನೆಯ ಜಿಲ್ಲಾ ಮಟ್ಟದ ಚಟುವಟಿಕೆಗಳು ರಾಜ್ಯಾದ್ಯಂತ ಗಮನಾರ್ಹವಾಗಿದೆ. 771 ಹಸಿರು ದ್ವೀಪಗಳನ್ನು ನಿರ್ಮಿಸಲಾಗಿದೆ ಎಂದು ಹಸಿರು ಕೇರಳ ಮಿಷನ್‍ನ ಜಿಲ್ಲಾ ಸಂಯೋಜಕರು ಹೇಳಿರುವರು. 21,794 ಎಕರೆ ಪ್ರದೇಶದಲ್ಲಿ ಈಗಾಗಲೇ 90,000 ಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ.
ಹಸಿರು ದ್ವೀಪ ಯೋಜನೆಯು ಸಾರ್ವಜನಿಕ ಪ್ರದೇಶಗಳು ಸೇರಿ ಪಾಳುಭೂಮಿಗಳನ್ನು ಕಂಡುಹಿಡಿದು ವಿಶಿಷ್ಟ ಮರಗಳು ಮತ್ತು ಸ್ಥಳೀಯ ಸಸ್ಯಗಳನ್ನು ಸೇರಿಸಿ ನೈಸರ್ಗಿಕ ಜೀವವೈವಿಧ್ಯದ ತಾಣಗಳನ್ನು ಸೃಷ್ಟಿಸಿ ಸಂರಕ್ಷಿಸುವ ಗುರಿಯನ್ನು “ಪಚ್ಚ ತುರುತ್ತು“ ಯೋಜನೆ ಹೊಂದಿದೆ. ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಇದಕ್ಕಾಗಿ ಸ್ಥಳಗಳನ್ನು ಪತ್ತೆಮಾಡಲಾಗುತ್ತಿದೆ. ಸರ್ಕಾರಿ /ಖಾಸಗಿ ಭೂಮಿ, ಹೊರವಲಯಗಳು, ನಗರಗಳ ಹೃದಯಭಾಗದಲ್ಲಿಯೂ, ಇತರ ಪ್ರದೇಶಗಳಲ್ಲಿಯೂ ಇರುವ ಖಾಲಿ ಜಾಗಗಳು ಹಸಿರು ದ್ವೀಪಗಳನ್ನು ಸ್ಥಾಪಿಸಲು ಸೂಕ್ತವಾದ ಸ್ಥಳಗಳಾಗಿವೆ.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡುವಲ್ಲಿ ಮತ್ತು ಹಸಿರುಮನೆ ಅನಿಲಗಳಿಂದ ಉಂಟಾಗುವ ಜಾಗತಿಕ ತಾಪಮಾನ ಏರಿಕೆಯನ್ನು ಎದುರಿಸುವಲ್ಲಿ ಹಸಿರು ದ್ವೀಪಗಳು ನಿರ್ಣಾಯಕ ಪಾತ್ರ ವಹಿಸಲಿವೆ. ವಾತಾವರಣದಲ್ಲಿ ಹೆಚ್ಚು ಇರುವ ಅಂಗಾರಾಮ್ಲವನ್ನು ಹೀರಿಕೊಂಡು ಸಂಗ್ರಹಿಸಿಡುವ ಅಂಗಾರಾಮ್ಲದ ಗೋದಾಮುಗಳಾಗಿ ಕಾರ್ಯನಿರ್ವಹಿಸುವ ಹಸಿರು ದ್ವೀಪಗಳು ಸ್ಥಳೀಯ ಜೀವವೈವಿಧ್ಯತೆಯ ರಕ್ಷಣೆಯನ್ನು ಖಚಿತಪಡಿಸುತ್ತವೆ.
ಈ ಯೋಜನೆಯನ್ನು ಸಾಮಾಜಿಕ ಅರಣ್ಯ ಇಲಾಖೆ, ಜೀವವೈವಿಧ್ಯ ಮಂಡಳಿ, ಆಯುμï ಇಲಾಖೆ, ಸ್ಥಳೀಯ ಸ್ವಯಂ ಅಡಳಿತ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳು ಅನುμÁ್ಠನಗೊಳಿಸುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಅಯ್ಯಂಕಾಳಿ ನಗರ ಉದ್ಯೋಗ ಖಾತರಿ ಯೋಜನೆಗಳು ಕೂಡಾ ಈ ಯೋಜನೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ 210 ಶಾಲೆಗಳು, 29 ಕಾಲೇಜುಗಳು, 15 ಅಂಗನವಾಡಿಗಳು, 34 ಆರೋಗ್ಯ ಸಂಸ್ಥೆಗಳು, 80 ಬನಗಳು, 17 ದೇವಾಲಯದ ಅಂಗಣಗಳು, 13 ಮ್ಯಾಂಗ್ರೋವ್ ದ್ವೀಪಗಳು, 6 ಮಿಯಾವಾಕಿ ಕಾಡುಗಳು, 6 ಸ್ಮಾರಕ ಸ್ಥಳಗಳು, 6 ಗ್ರಂಥಾಲಯಗಳು, 3 ಬಿದಿರು ಕಾಡುಗಳು ಮತ್ತು 5 ಸಿವಿಲ್ ಸ್ಟೇಷನ್ ಕಾಂಪೌಂಡ್‍ಗಳು ಸೇರಿದಂತೆ ಒಟ್ಟು 771 ಹಸಿರು ದ್ವೀಪಗಳನ್ನು ರಚಿಸಲಾಗಿದೆ.
ಜಿಲ್ಲಾ ಪಂಚಾಯತಿ ನೇತೃತ್ವದಲ್ಲಿ ನಾಲೀಲಂಕಂಡ ಸರ್ಕಾರಿ ಯು.ಪಿ. ಶಾಲೆಯಲ್ಲಿ ಸ್ಥಾಪಿಸಿದ ಜೈವವೈವಿಧ್ಯ ಉದ್ಯಾನ, ಕಾಸರಗೋಡು ಸರ್ಕಾರಿ ಕಾಲೇಜು, ನೆಹರು ಕಾಲೇಜು ಪಡನ್ನಕ್ಕಾಡ್ ಮೊದಲಾದ ಸುಮಾರು 100 ಸರ್ಕಾರಿ ಶಾಲೆಗಳ ಹಸಿರು ದ್ವೀಪಗಳು ಅವುಗಳ ಜೀವವೈವಿಧ್ಯತೆಯ ಶ್ರೀಮಂತಿಕೆಗೆ ಗಮನಾರ್ಹವಾಗಿವೆ.
ಸ್ಥಳೀಯ ಸಸ್ಯಗಳು, ಔಷಧೀಯ ಸಸ್ಯಗಳು ಮತ್ತು ಅರಣ್ಯ ಸಸ್ಯಗಳನ್ನು ಬೆಳೆಸುವ ಮೂಲಕ ಹಸಿರು ವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿಶ್ವ ಅರಣ್ಯ ದಿನದ ಭಾಗವಾಗಿ ಜಿಲ್ಲೆಯ ಮ್ಯಾಂಗ್ರೋವ್‍ಗಳು ಮತ್ತು ಇತರ ಹಸಿರು ವನಗಳನ್ನು ಸಂರಕ್ಷಿಸಲು ಹಸಿರು ಕೇರಳ ಮಿಷನ್ ವಿಶೇಷ ಚಟುವಟಿಕೆಗಳನ್ನು ಆಯೋಜಿಸಿದೆ.
ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮರ ನೆಡುವ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಲು ಹಸಿರು ಕೇರಳ ಮಿಷನ್, ಸ್ಥಳೀಯ ಆಡಳಿತ ಸಂಸ್ಥೆಗಳು, ಶಾಲೆಗಳು, ಕಾಲೇಜುಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ನಿಯಂತ್ರಣದಲ್ಲಿ ಹಸಿರು ದ್ವೀಪಗಳು ಮಹತ್ವದ ಕೊಡುಗೆ ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಹಸಿರು ಕೇರಳ ಮಿಷನ್ ಯೋಜನೆ ಮುಂದುವರಿಸುತ್ತಿದೆ.