ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ 8ನೇ ವರ್ಷದ ಘಟಿಕೋತ್ಸವ ಮಾರ್ಚ್ 8ರಂದು ಬೆಳಗ್ಗೆ 10ಕ್ಕೆ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ ಜರುಗಲಿದೆ. ಕಾರ್ಯಕ್ರಮದಲ್ಲಿ ತಿರುವನಂತಪುರದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಎಸ್.ಉಣ್ಣಿಕೃಷ್ಣನ್ ನಾಯರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಕೇಂದ್ರೀಯ ವಿಶ್ವ ವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ವಿಶ್ವವಿದ್ಯಾಲಯದ ಕೋರ್ಟ್ ಸದಸ್ಯರು, ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಜನಪ್ರತಿನಿಧಿಗಳು, ಡೀನ್‍ಗಳು, ವಿಭಾಗದ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಳ್ಳುವರು.
2024ರಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, 851 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿಪ್ರದಾನ ಮಾಡಲಾಗುವುದು. ಇದರಲ್ಲಿ 664 ಮಂದಿ ನೇರವಾಗಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದಾರೆ. 41 ಮಂದಿಗೆ ಪದವಿ, 727ಮಂದಿಗೆ ಸ್ನಾತಕೋತ್ತರ ಪದವಿ, 58ಮಂದಿಗೆ ಪಿಎಚ್‍ಡಿ ಪದವಿ ಮತ್ತು 25 ಮಂದಿಗೆ ಪಿಜಿ ಡಿಪೆÇ್ಲಮಾ ಪದವಿ ನೀಡಲಾಗುವುದು. ವಿಶೇಷ ಅತಿಥಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಂಪ್ರದಾಯಿಕ ಉಡುಗೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಧೋತಿ, ಪ್ಯಾಂಟ್, ಪೈಜಾಮ, ಕುರ್ತಾ, ಚೂಡಿದಾರ್ ಮತ್ತು ಸೀರೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಿವಿಧ ಅಧ್ಯಯನ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುವುದು. ಎಲ್ಫಾ ನಶೀದಾ (ಭಾಷಾಶಾಸ್ತ್ರ), ಅಶ್ವತಿ ಎಪಿ. (ಗಣಿತ), ಅಂಜನಾ ಪಿಎಸ್ (ನಿರ್ವಹಣೆ ಅಧ್ಯಯನ), ಅನಿಲ ವಿ (ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ) ಮತ್ತು ಸದಿ ಅನುಗ್ನಾ ರಾವ್ (ಸಾರ್ವಜನಿಕ ಆಡಳಿತ ಮತ್ತು ನೀತಿ ಅಧ್ಯಯನಗಳು) ಅವರಿಗೆ ಪದಕ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡೀನ್ ಅಕಾಡೆಮಿಕ್ ಪೆÇ್ರ. ಅಮೃತ್ ಜಿ ಕುಮಾರ್, ಡೀನ್ ಸ್ಟೂಡೆಂಟ್ ವೆಲ್‍ಫೇರ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ, ಪ್ರಚಾರ ಮತ್ತು ಮಾಧ್ಯಮ ಸಮಿತಿ ಅಧ್ಯಕ್ಷ ಪೆÇ್ರ. ಮನು, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ. ಸುಜಿತ್ ಉಪಸ್ಥಿತರಿದ್ದರು.