ನವದೆಹಲಿ: ವಲಸೆ ನೀತಿಯನ್ನು ಉಲ್ಲಂಘಿಸುತ್ತಿರುವ ಏಜೆಂಟರ ವಿರುದ್ಧ 'ಶೂನ್ಯ ಸಹಿಷ್ಣುತೆ' ಹೊಂದಿರುವುದಾಗಿ ಹೇಳಿರುವ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯು, ಕೃತಕ ಬುದ್ಧಿಮತ್ತೆಯ ಬಾಟ್‌ಗಳ ಮೂಲಕ ಕಾಯ್ದಿರಿಸಲಾದ ಸುಮಾರು ಎರಡು ಸಾವಿರ ವಿಸಾ ಅರ್ಜಿಗಳನ್ನು ರದ್ದುಪಡಿಸಲಾಗಿದೆ ಎಂದು ಖಚಿತಪಡಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನ ರಾಯಭಾರ ಕಚೇರಿಯ ಖಾತೆಯಲ್ಲಿ ವಿಷಯವನ್ನು ಹಿರಿಯ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
'ಬಾಟ್‌ಗಳನ್ನು ಬಳಸಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿಸಾ ಅರ್ಜಿಗಳನ್ನು ಸಲ್ಲಿಸುವ ಮೂಲಕ ಕಾನೂನು ಉಲ್ಲಂಘಿಸಿರುವ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇವರಿಗೆ ನೋಟಿಸ್ ಜಾರಿ ಮಾಡಲಾಗಿದೆ' ಎಂದಿದ್ದಾರೆ.
'ವಿದ್ಯಾರ್ಥಿಗಳು, ಪ್ರವಾಸಿಗರನ್ನು ಒಳಗೊಂಡು ಅಮೆರಿಕದ ವಿಸಾಗೆ ಭಾರೀ ಬೇಡಿಕೆ ಇದೆ. 2023ರಲ್ಲಿ ಅಮೆರಿಕವು 14 ಲಕ್ಷ ಭಾರತೀಯರಿಗೆ ವಿಸಾ ನೀಡಿದೆ. ಇವರಲ್ಲಿ 1.40 ಲಕ್ಷ ವಿದ್ಯಾರ್ಥಿ ವಿಸಾ ಸೇರಿದೆ' ಎಂದು ಹೇಳಿದ್ದಾರೆ.