HEALTH TIPS

ಕೃಷಿಯಲ್ಲಿ ಹೊಸ ಕ್ರಾಂತಿ! ತೆಂಗಿನ ಕಾಯಿ ಕೊಯ್ಲು ಮಾಡಲು ಬಂತು AI ಚಾಲಿತ "ಕೊಕೊ-ಬಾಟ್"!

ಕೊಚ್ಚಿ: ತೆಂಗಿನಕಾಯಿ ಅಭಿವೃದ್ಧಿ ಮಂಡಳಿ (CDB) ಡೇಟಾಬೇಸ್ ಪ್ರಕಾರ, 12 ವರ್ಷಗಳಲ್ಲಿ ತರಬೇತಿ ಪಡೆದ ಸುಮಾರು 32,925 ತೆಂಗಿನ ಮರ ಏರುವವರಲ್ಲಿ, ಕೇವಲ 673 ಏರುವವರು ಮಾತ್ರ ಸಕ್ರಿಯರಾಗಿದ್ದಾರೆ. ಆದ್ದರಿಂದ, ತೆಂಗಿನಕಾಯಿ ಬೆಳೆಗಾರರು ತೆಂಗಿನಕಾಯಿ (Coconut) ಇಳಿಸುವವರ ಕೊರತೆಯಿಂದ ಎದುರಿಸುತ್ತಿರುವ ದೊಡ್ಡ ಸಮಸ್ಯೆಗೆ ಪರಿಹಾರವಾಗಿ (Solution), ಕೋಳಿಕ್ಕೋಡ್‌ನ ನಾಲ್ಕು ಯುವಕರು 'ಕೊಕೊ-ಬಾಟ್' ಎಂಬ AI-ಚಾಲಿತ ತೆಂಗಿನಕಾಯಿ ಕೊಯ್ಲು ಯಂತ್ರವನ್ನು (Machine) ಅಭಿವೃದ್ಧಿಪಡಿಸಿದ್ದಾರೆ.

ಈ ನಾವೀನ್ಯತೆ ಈಗಾಗಲೇ ಮಾರಿಕೊ ಲಿಮಿಟೆಡ್ ನಂತಹ ಪ್ರಮುಖ ಕಂಪನಿಗಳ ಗಮನ ಸೆಳೆದಿದೆ. ರೈತರಿಗೆ ಸಹಾಯ ಮಾಡಲು ಸಜ್ಜಾಗಿರುವ ಕೋಳಿಕ್ಕೋಡ್ ಯುವಕರ ನೂತನ ಆವಿಷ್ಕಾರದ ಬಗ್ಗೆ ನಾವಿಲ್ಲಿ ತಿಳಿಯೋಣ.

ಇತರ ಯಂತ್ರಗಳಿಂದ ವಿಭಿನ್ನಹೇಗೆ? 'ಕೊಕೊ-ಬಾಟ್'ನ ವೈಶಿಷ್ಟ್ಯಗಳು

ಮಾರುಕಟ್ಟೆಯಲ್ಲಿ ಇತರ ತೆಂಗಿನಕಾಯಿ ಕೊಯ್ಲುವ ರೋಬೋಟ್‌ಗಳಿಗಿಂತ 'ಕೊಕೊ-ಬಾಟ್' ಹೆಚ್ಚು ಪ್ರಾಯೋಗಿಕವಾಗಿದೆ. ಹೇಗೆ ಅಂತೀರಾ, ಇಲ್ಲಿ ತಿಳಿಯಿರಿ.


  • ಹಗುರ ಮತ್ತು ಸಾಂದ್ರ - ಕೇವಲ 10 ಕೆಜಿ ತೂಕ

  • AI-ಸಹಾಯದಿಂದ ಪ್ರೌಢ ತೆಂಗಿನಕಾಯಿಗಳನ್ನು ಗುರುತಿಸುವ ಸಾಮರ್ಥ್ಯ
    ಅರೆ-ಸ್ವಯಂಚಾಲಿತ ತಂತ್ರಜ್ಞಾನ - ಒಬ್ಬ ವ್ಯಕ್ತಿಯೇ ಸುಲಭವಾಗಿ ನಿರ್ವಹಿಸಬಹುದು

  • ತ್ವರಿತ ಲಾಕಿಂಗ್ ವ್ಯವಸ್ಥೆ - ಕೇವಲ 5 ಸೆಕೆಂಡುಗಳಲ್ಲಿ ಕಾರ್ಯನಿರ್ವಹಣೆ


"ಕೊಕೊ-ಬಾಟ್ ಬಳಸಿ ನಾನು ತೆಂಗಿನಕಾಯಿ ಕೊಯ್ಲು ಮಾಡಿದ್ದು ತುಂಬಾ ಸುಲಭ ಮತ್ತು ಸಮಯ ಉಳಿತಾಯವಾಗಿದೆ" ಎನ್ನುತ್ತಾರೆ ತೆಂಗಿನ ಕಾಯಿ ರೈತ ಕೆ. ಸದನಾಥನ್.

ಈ ಆವಿಷ್ಕಾರ ಶುರುವಾಗಿದ್ದು ಹೇಗೆ? ಸ್ನಾನಗೃಹದಲ್ಲಿ ಹುಟ್ಟಿದ ಐಡಿಯಾ!

ಈ ಆವಿಷ್ಕಾರದ ಜನ್ಮ ಕಥೆ ವಿಶಿಷ್ಟವಾಗಿದೆ. 'ಕೊಕೊ-ಬಾಟ್'ನ ಸ್ಥಾಪಕ ಅಶಿನ್ ಪಿ ಕೃಷ್ಣ ಅವರು , 2020ರಲ್ಲಿ ಸ್ನಾನಗೃಹದಲ್ಲಿ ಈ ಐಡಿಯಾ ಮೂಡಿತು ಎಂದಿದ್ದಾರೆ.

ಅವರು ತಮ್ಮ ಮನೆಯ ಬಾಲ್ಕನಿಯಿಂದ ತೆಂಗಿನ ಮರವನ್ನು ಗಮನಿಸಿ, "ಇದಕ್ಕೆ ಒಂದು ಸ್ವಯಂಚಾಲಿತ ಯಂತ್ರ ಮಾಡಬಹುದಾ?" ಎಂದು ಯೋಚಿಸಿದರು.

ಆಲ್ಟರ್ಸೇಜ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಅಶಿನ್‌ ಪಿ ಕೃಷ್ಣ ಅವರು "ನನಗೆ ಈ ಆವಿಷ್ಕಾರದ ಕಲ್ಪನೆ ಸ್ನಾನಗೃಹದಲ್ಲಿ ಮೂಡಿತು. ಕೃಷಿಯಲ್ಲಿ AI ಬಳಸಬಹುದು ಎಂದು ನಾನು ಯೋಚಿಸಿದೆ, ಇಂದು ಅದು ನಿಜವಾಗಿದೆ." ಎನ್ನುತ್ತಾರೆ.

ಸಂಶೋಧನೆ ಮತ್ತು ಅಭಿವೃದ್ಧಿ : ಹ್ಯಾಕಥಾನ್ ಗೆಲುವಿನ ಕಥೆ


  • 2021 - ತಂಡವು ಒಂದು ವರ್ಷ ಸಂಶೋಧನೆ ನಡೆಸಿ ಮೊದಲ ಪ್ರಾಯೋಗಿಕ ಮಾದರಿಯನ್ನು ಅಭಿವೃದ್ಧಿಪಡಿಸಿತು.

  • 2023 - ಕೇರಳ ಸ್ಟಾರ್ಟ್‌ಅಪ್ ಮಿಷನ್ ಇವರ ಯೋಜನೆಗೆ ಬೆಂಬಲ ನೀಡಿ ನಿಧಿ ಒದಗಿಸಿತು.

  • ವೈಗಾ ಹ್ಯಾಕಥಾನ್ - 36-ಗಂಟೆಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ತಂತ್ರಜ್ಞಾನವನ್ನು ಮತ್ತಷ್ಟು ಪರಿಪೂರ್ಣಗೊಳಿಸಿದರು.


"ನಾವು ಹ್ಯಾಕಥಾನ್ ಗೆದ್ದ ಬಳಿಕ, ನಬಾರ್ಡ್ ನಮ್ಮ ಯೋಜನೆಯನ್ನು ಬೆಂಬಲಿಸಿತು. ಇದು ನಮಗೆ ದೊಡ್ಡ ಮುನ್ನಡೆ ನೀಡಿತು!" ಎನ್ನುತ್ತಾರೆ ಅಶಿನ್ ಪಿ ಕೃಷ್ಣ.

ನಬಾರ್ಡ್ ಮತ್ತು ಸರ್ಕಾರದ ಬೆಂಬಲ

ಹ್ಯಾಕಥಾನ್ ಯಶಸ್ಸಿನ ಬಳಿಕ, ನಬಾರ್ಡ್ ಈ ಆವಿಷ್ಕಾರವನ್ನು ಗಮನಿಸಿ, ಅಭಿವೃದ್ಧಿಗೆ ನೆರವು ನೀಡಿತು. ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ರಿಯಾಸ್ ಮುಹಮ್ಮದ್ ಮತ್ತು ರಾಕೇಶ್ ವಿ ತಂಡಕ್ಕೆ ಆರ್ಥಿಕ ನೆರವು ಒದಗಿಸಿದರು.

ಕೇರಳ ಕೃಷಿ ವಿಶ್ವವಿದ್ಯಾಲಯದ ರಫ್ತಾರ್ ಕೃಷಿ-ವ್ಯವಹಾರ ಇನ್ಕ್ಯುಬೇಟರ್ ಮತ್ತು ಕೊಚ್ಚಿಯ ಮೇಕರ್ ವಿಲೇಜ್ ಸಹ ಈ ಯೋಜನೆಗೆ ಬೆಂಬಲ ನೀಡಿವೆ.

"ನಾವು ಈ ಯೋಜನೆಯನ್ನು ಬೆಂಬಲಿಸಿದ್ದಕ್ಕೆ ಹೆಮ್ಮೆ. ಇದು ರೈತರ ಜೀವನವನ್ನು ಸುಲಭಗೊಳಿಸಲಿದೆ!" ಎನ್ನುತ್ತಾರೆ ನಬಾರ್ಡ್‌ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ರಿಯಾಸ್ ಮುಹಮ್ಮದ್.

ಭವಿಷ್ಯದ ದೃಷ್ಟಿಕೋಣ : ಸಂಪೂರ್ಣ ಸ್ವಯಂಚಾಲಿತ ಕೊಯ್ಲು ಯಂತ್ರ

ಈಗಾಗಲೇ ಅರೆ-ಸ್ವಯಂಚಾಲಿತ ಆಗಿರುವ 'ಕೊಕೊ-ಬಾಟ್', ಭವಿಷ್ಯದಲ್ಲಿ ಸಂಪೂರ್ಣ ಸ್ವಯಂಚಾಲಿತ ತೆಂಗಿನಕಾಯಿ ಕೊಯ್ಲು ಯಂತ್ರವಾಗಿ ಪರಿವರ್ತನೆಯಾಗಲಿದೆ.


  • ಇದಕ್ಕೆ ಕಡಿಮೆ ಬಂಡವಾಳದ ಅಗತ್ಯವಿದೆ

  • ಇದರಿಂದ ರೈತರ ಸಮಯ ಮತ್ತು ದುಡಿಮೆ ಉಳಿಯುವುದು

  • ಇದು ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸುವ ಮಹತ್ವದ ಹೆಜ್ಜೆ


"ಇದು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಇದನ್ನು ನಾವು ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇವೆ." ಎಂದು ವಡಕರ ತೆಂಗಿನಕಾಯಿ ರೈತರ ಒಕ್ಕೂಟದ ಸದಸ್ಯರು ಹೇಳುತ್ತಾರೆ

2025 : ಕೋಕೊ-ಬಾಟ್ ರೈತರ ಕೈಗೆ ತಲುಪಲಿದೆ!

2025ರ ಮೊದಲ ಭಾಗದಲ್ಲಿ, ಈ ಯಂತ್ರದ ಪ್ರಥಮ ಪೈಲಟ್ ಟೆಸ್ಟಿಂಗ್ (Pilot Testing) ನಡೆಯಲಿದೆ. ಕೃಷಿ ಕ್ಷೇತ್ರದಲ್ಲಿ AI ಆಧಾರಿತ ನವೀನ ತಂತ್ರಜ್ಞಾನ ತಂದಿರುವ ಈ ಆವಿಷ್ಕಾರ, ರೈತರ ಭವಿಷ್ಯವನ್ನು ಬದಲಾಯಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries