ನವದೆಹಲಿ: ದೆಹಲಿಯಲ್ಲಿ ಶನಿವಾರ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(AQI) 85ಕ್ಕೆ ಇಳಿದಿದ್ದು, ಇದು ಜನವರಿ 1 ರಿಂದ ಮಾರ್ಚ್ 15 ರವರೆಗಿನ ಅವಧಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಅತ್ಯಂತ ಶುದ್ಧ ಗಾಳಿಯಾಗಿದೆ.
ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಪ್ರಕಾರ, AQI ಈ ವರ್ಷದಲ್ಲಿ ಮೊದಲ ಬಾರಿ 'ತೃಪ್ತಿದಾಯಕ' ವರ್ಗದಲ್ಲಿ ದಾಖಲಾಗಿದೆ. AQI 50 ರಿಂದ 100 ರ ನಡುವೆ ಇದ್ದರೆ ಅದನ್ನು 'ತೃಪ್ತಿದಾಯಕ' ಎಂದು ಪರಿಗಣಿಸಲಾಗುತ್ತದೆ.
"ಇಂದು, ದೆಹಲಿಯಲ್ಲಿ ಸರಾಸರಿ AQI 85 ದಾಖಲಾಗಿದೆ. ಇದು ಜನವರಿ 01 ರಿಂದ ಮಾರ್ಚ್ 15 ರವರೆಗಿನ ಅವಧಿಯಲ್ಲಿ ಕಳೆದ ಮೂರು ವರ್ಷಗಳಲ್ಲಿಯೇ ದಾಖಲಾದ ಅತ್ಯಂತ ಕಡಿಮೆ AQI ಆಗಿದೆ.
ಇಂದಿನ AQI 'ತೃಪ್ತಿದಾಯಕ' AQI(AQI 51-100) ಹೊಂದಿರುವ ಪ್ರಸಕ್ತ ವರ್ಷದ ಮೊದಲ ದಿನವಾಗಿದೆ. ದೆಹಲಿಯು ಮಾರ್ಚ್ ತಿಂಗಳಲ್ಲಿ 'ತೃಪ್ತಿದಾಯಕ' AQI ಅನ್ನು ದಾಖಲಿಸಿದೆ. 2020 ರಿಂದ ಐದು ವರ್ಷಗಳಲ್ಲಿ ಮೊದಲ ಬಾರಿಗೆ 'ತೃಪ್ತಿದಾಯಕ" ವರ್ಗದಲ್ಲಿ ದಾಖಲಾಗಿದೆ ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ X ನಲ್ಲಿ ಪೋಸ್ಟ್ ಮಾಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಪ್ರಕಾರ, 50 ರವರೆಗಿನ AQI ಅನ್ನು 'ಉತ್ತಮ' ಎಂದು, 51 ರಿಂದ 100 'ತೃಪ್ತಿದಾಯಕ', 101 ರಿಂದ 200 'ಮಧ್ಯಮ', 201 ರಿಂದ 300 'ಕಳಪೆ', 301 ರಿಂದ 400 'ತುಂಬಾ ಕಳಪೆ' ಮತ್ತು 401 ರಿಂದ 500 ಅತ್ಯಂತ 'ಗಂಭೀರ' ಎಂದು ಪರಿಗಣಿಸಲಾಗುತ್ತದೆ.