ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಜಲ ದಿನದ ಅಂಗವಾಗಿ ನೀರಿನ ಮಹತ್ವದ ಬಗ್ಗೆ ಪ್ರಚಾರ ಅಭಿಯಾನ ಆಯೋಜಿಸಲಾಯಿತು.
ಕಾಸರಗೋಡು ನಗರದಲ್ಲಿ ಕಾಯಚರಿಸುತ್ತಿರುವ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕೆ.ಎನ್. ರಾಮಕೃಷ್ಣ ಹೊಳ್ಳ ಸಹೋದರರ ಮಾಲಿಕತ್ವದ ಶ್ರೀ ವೆಂಟ್ರಮಣ ಭವನದಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಯಿತು. "ಜಲವು ಅಮೂಲ್ಯವಾದದ್ದು ಅದನ್ನು ಪೆÇಲು ಮಾಡಬೇಡಿ" ಎಂಬ ಎಕೆಪಿಎ ಜಿಲ್ಲಾ ಸಮಿತಿ ವತಿಯಿಂದ ತಯಾರಿಸಲಾದ ಭಿತ್ತಿಪತ್ರವನ್ನು ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ಅವರು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಎಕೆಪಿಎ ಕಾಸರಗೋಡು ಜಿಲ್ಲಾ ಕ್ರಿಕೆಟ್ ಕೊರ್ಡಿನೇಟರ್ ರತೀಶ್ ರಾಮು, ಯೂನಿಟ್ ಕಾರ್ಯದರ್ಶಿ ವಿಶಾಕ್, ಕೋಶಾಧಿಕಾರಿ ಗಣೇಶ್ ರೈ, ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಯೂನಿಟ್ ನಿರೀಕ್ಷಕ ಶ್ರೀಜಿತ್ ವಿದ್ಯಾನಗರ, ಸದಸ್ಯರಾದ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.