ಕಾಸರಗೋಡು: ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆಯ ಜಿಲ್ಲಾ ಮಟ್ಟದ ಘೋಷಣೆ ಮತ್ತು ಸಮಿತಿ ರಚನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಿಂದ ಲಭಿಸುವ ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಬೇಕು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಹಾಗೂ ದಾರಿದೀಪವಾಗುವ ರೀತಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಬೆರೆತು ಕಾರ್ಯ ನಿರ್ವಹಿಸಭೆಖೂ ಎಂದು ಥೀಲೀಶೀಧೃಊ.
ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ಪಿ. ಸುರ್ಜಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಗ್ರ ಶಿಕ್ಷಾ ಕೇರಳ ಡಿ ಪಿ ಸಿ ವಿ ಎಸ್ ಬಿಜುರಾಜ್ ಸಮಗ್ರ ಶಿಕ್ಷಣ ಗುಣಮಟ್ಟ ಯೋಜನೆಯ ದಾಖಲೆಯನ್ನು ಮಂಡಿಸಿದರು. ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಹಮೀದ್, ಡಯಟ್ ಪ್ರಾಂಶುಪಾಲ ರಘುರಾಮ ಭಟ್, ಕೈಟ್ ಜಿಲ್ಲಾ ಸಂಯೋಜಕಿ ರೋಜಿ ಜೋಸೆಫ್, 'ವಿದ್ಯಾಕರಣಂ' ಜಿಲ್ಲಾ ಸಂಯೋಜಕ ಸುನೀಲ್ ಕುಮಾರ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್ ಸ್ವಾಗತಿಸಿದರು. ವಿಎಚ್‍ಎಸ್‍ಇ ಸಹಾಯಕ ನಿರ್ದೇಶಕಿ ಇ.ಆರ್. ಉದಯಕುಮಾರಿ ವಂದಿಸಿದರು.