HEALTH TIPS

ಸಂಸತ್‌ ಅಧಿವೇಶನ: 'ಎಪಿಕ್‌ ಸಂಖ್ಯೆ' ಪ್ರತಿಧ್ವನಿ?

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗವು ಸೋಮವಾರದಿಂದ ಆರಂಭವಾಗಲಿದ್ದು, ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್ ಸಂಖ್ಯೆ ಹೊಂದಿರುವುದು, ಕ್ಷೇತ್ರ ಮರುವಿಂಗಡಣೆ ಮತ್ತು ತ್ರಿಭಾಷಾ ನೀತಿ ಮೂಲಕ ಹಿಂದಿ ಹೇರಿಕೆ ವಿಚಾರಗಳು ಮೇಲ್ಮನೆ ಮತ್ತು ಕೆಳಮನೆಯಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ.

ಈ ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಅಸ್ತ್ರ ಹೂಡಿದ್ದರೆ, ವಿವಾದಾತ್ಮಕ ವಕ್ಫ್‌ ಮಸೂದೆಗೆ ಅಂಗೀಕಾರ ಪಡೆಯಲು ಸರ್ಕಾರ ಸಿದ್ಧತೆ ನಡೆಸಿದೆ.

ಜೊತೆಗೆ, ಅಕ್ರಮ ವಲಸಿಗರನ್ನು ಅಮೆರಿಕ ಗಡೀಪಾರು ಮಾಡಿರುವುದು ಮತ್ತು ಭಾರತದ ಮೇಲೆ ಪ್ರತಿಸುಂಕ ಹೇರಿಕೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿರುವ ವಿಚಾರದ ಬಗ್ಗೆಯೂ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಪಟ್ಟುಹಿಡಿಯಲು ವಿಪಕ್ಷಗಳು ಉತ್ಸುಕವಾಗಿವೆ.

ಅಧಿವೇಶನದಲ್ಲಿ 'ಅಲ್ಪ ಅವಧಿಯ ಚರ್ಚೆ', 'ಗಮನಸೆಳೆಯುವ ಸೂಚನೆ', 'ಶೂನ್ಯ ವೇಳೆ'ಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಗೆ ಇಂಬುಗೊಡಲು ವಿಪಕ್ಷಗಳು ಒಂದಾಗಿವೆ. ಒಂದೇ ಎಪಿಕ್ ಸಂಖ್ಯೆ ವಿವಾದದ ಬಗ್ಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್‌ ಎರಡೂ ಒಟ್ಟಾಗಿ ಧ್ವನಿ ಎತ್ತುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶ ಕೋರಿ ವಿರೋಧ ಪಕ್ಷಗಳು ಪ್ರತ್ಯೇಕವಾಗಿ ಮತ್ತು ಜಂಟಿಯಾಗಿ ಮನವಿ ಸಲ್ಲಿಸಿವೆ ಎಂದು ತಿಳಿಸಿವೆ.

ಟಿಎಂಸಿ ರಾಜ್ಯಸಭಾ ನಾಯಕ ಡೆರೆಕ್‌ ಒಬ್ರಯಾನ್‌ ಅವರು, 'ಹಲವು ಮತದಾರರ ಚೀಟಿಗಳಲ್ಲಿ ಒಂದೇ ಎಪಿಕ್‌ ಸಂಖ್ಯೆ ಇರುವುದು ಗಂಭೀರ ವಿಷಯ. ಈ ಬಗ್ಗೆ ಚುನಾವಣಾ ಆಯೋಗ ನೀಡಿರುವ ಸ್ಪಷ್ಟನೆಯು ತೃಪ್ತಿ ತಂದಿಲ್ಲ' ಎಂದು ಹೇಳಿದ್ದಾರೆ.

ಜಂಟಿ ಸಂಸದೀಯ ಸಮಿತಿಯು ವಕ್ಫ್‌ ತಿದ್ದುಪಡಿ ಮಸೂದೆ -2024ಕ್ಕೆ ಸಂಬಂಧಿಸಿದಂತೆ ತನ್ನ ವರದಿಯನ್ನು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಫೆ.13ರಂದು ಸಲ್ಲಿಸಿದೆ. ಕೇಂದ್ರ ಸರ್ಕಾರವು ಈ ಮಸೂದೆ ಜೊತೆಗೆ ವಲಸೆ ಮತ್ತು ವಿದೇಶಿಯರ ಮಸೂದೆ-2025 ಅನ್ನೂ ಮಂಡಿಸುವ ಸಾಧ್ಯತೆ ಇದೆ.

ಅಧಿವೇಶನವು ಏಪ್ರಿಲ್ 4ರಂದು ಮುಕ್ತಾಯಗೊಳ್ಳಲಿದೆ.

 .

ಮೂರು ತಿಂಗಳಿನಲ್ಲಿ ವಿಶಿಷ್ಟ ಸಂಖ್ಯೆ

ಹಲವು ಮತದಾರರ ಗುರುತಿನ ಚೀಟಿಗಳು ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ಸಮಸ್ಯೆಯನ್ನು ಮೂರು ತಿಂಗಳಿನಲ್ಲಿ ಪರಿಹರಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಒಂದೇ ಎಪಿಕ್‌ ಸಂಖ್ಯೆ ಹೊಂದಿರುವ ವಿಚಾರವು ಈಗಾಗಲೇ ಆಯೋಗದ ಗಮನಕ್ಕೆ ಬಂದಿದೆ. ತಾಂತ್ರಿಕ ತಂಡ ಮತ್ತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಮುಂದಿನ ಮೂರು ತಿಂಗಳಲ್ಲಿ ಸರಿಪಡಿಸಲು ಆಯೋಗ ನಿರ್ಧರಿಸಿದೆ. ಒಂದೇ ಎಪಿಕ್‌ ಸಂಖ್ಯೆ ನೀಡಿರುವ ಮತದಾರರ ಗುರುತಿನ ಚೀಟಿಗಳಿಗೆ ವಿಶಿಷ್ಟ ಸಂಖ್ಯೆಗಳನ್ನು ನೀಡಲಾಗುತ್ತದೆ ಎಂದು ಆಯೋಗವು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಇದೇ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿಯ (ಎಪಿಕ್) ಸಂಖ್ಯೆಗಳು ಏನೇ ಇರಬಹುದು. ಆದರೆ ಮತದಾರರು ತಮಗೆ ನಿಗದಿ ಮಾಡಲಾದ ಮತಗಟ್ಟೆಯಲ್ಲಿ ಮಾತ್ರ ಮತ ಚಲಾಯಿಸಬಹುದು' ಎಂದು ಆಯೋಗವು ಮತ್ತೆ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries