ಬದಿಯಡ್ಕ: ಉಬ್ರಂಗಳ ಶ್ರೀ ಐವರ್ ವಿಷ್ಣುಮೂರ್ತಿ ಚಾಮುಂಡಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 75 ಸಾವಿರ ರೂಪಾಯಿಗಳ ಡಿಡಿ ಯನ್ನು ಕ್ಷೇತ್ರ ಆಡಳಿತ ಸಮಿತಿಗೆ ಹಸ್ತಾಂತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯದ ವತಿಯಿಂದ ಧನಸಹಾಐ ಹಸ್ತಾಂತರಿಸಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷ ಅಖಿಲೇಶ್ ನಗುಮುಗಂ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುಕೇಶ್, ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಜನ ಜಾಗೃತಿ ವೇದಿಕೆ ಸದಸ್ಯರಾದ ಹರೀಶ್ ಗೋಸಾಡ, ಜಯರಾಮ ಪಾಟಾಳಿ, ಒಕ್ಕೂಟದ ಅಧ್ಯಕ್ಷ ತಾರಾನಾಥ ರೈ ವಿದ್ಯಾಗಿರಿ, ಕ್ಷೇತ್ರದ ಪದಾಧಿಕಾರಿಗಳಾದ ಹರಿನಾರಾಯಣ ಶಿರಂತಡ್ಕ , ಚಂದ್ರಶೇಖರ ಉಪಾಧ್ಯಾಯ, ವೇಣುಗೋಪಾಲ ಪುತ್ತಿಗೆ, ಸುರೇಶ್, ಸೇವಾ ಪ್ರತಿನಿಧಿ ಕಮಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.