ಸುಕ್ಮಾ: ಒಬ್ಬ ಮಹಿಳೆ ಸೇರಿ ನಾಲ್ವರು ನಕ್ಸಲರು ಶುಕ್ರವಾರ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎದುರು ಶರಣಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕಲ್ಮು ಅಯತೆ (35), ನುಪ್ಪೋ ರಘು (27), ಮಡಕಮ್ ಕೋನಾ (22) ಮತ್ತು ಸೋಧಿ ಲಚ್ಛಾ (27) ಶರಣಾದ ನಕ್ಸಲರು.
ಇವರಲ್ಲಿ 'ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನೆ' (ಕೆಎಎಂಎಸ್) ಮುಖ್ಯಸ್ಥೆಯಾದ ನಕ್ಸಲ್ ಮಹಿಳೆ ಕಲ್ಮು ಅಯತೆ ಬಗ್ಗೆ ಸುಳಿವು ನೀಡಿದವರಿಗೆ ₹2 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಉಳಿದ ಮೂವರು ನಿಷೇಧಿತ ಸಿಪಿಐ (ಮಾವೋವಾದಿ)ನ ರೆವಲ್ಯೂಷನರಿ ಪೀಪಲ್ಸ್ ಕಮಿಟಿಯ ಸಕ್ರಿಯ ಸದಸ್ಯರಾಗಿದ್ದರು.
ಬಸ್ತರ್ ಪ್ರದೇಶದಲ್ಲಿ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಭದ್ರತಾ ಪಡೆಗಳು 30 ನಕ್ಸಲರನ್ನು ಹತ್ಯೆ ಮಾಡಿದ ಮರು ದಿನವೇ ಈ ಶರಣಾಗತಿ ಆಗಿದೆ.