ಹೈದರಾಬಾದ್: ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಪಾಸಲ ಕೃಷ್ಣ ಭಾರತಿ (92) ಭಾನುವಾರ ನಿಧನರಾದರು.
ಮಹಾತ್ಮ ಗಾಂಧಿಯವರ ನಿಕಟವರ್ತಿಯಾಗಿದ್ದ ಪಾಸಲ ಕೃಷ್ಣಮೂರ್ತಿ ಮತ್ತು ಅಂಜಾ ಲಕ್ಷ್ಮೀ ದಂಪತಿಯ ಪುತ್ರಿಯಾಗಿದ್ದ ಇವರು, ಬಡವರು-ದಲಿತರ ಶಿಕ್ಷಣಕ್ಕಾಗಿ ಶ್ರಮಿಸಿದ್ದರು.
ಹಲವು ಶಿಕ್ಷಣ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದರು. ಗೋಶಾಲೆಗಳನ್ನು ನಡೆಸುತ್ತಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ತಂದೆ- ತಾಯಿ ಜೈಲಿನಲ್ಲಿದ್ದಾಗಲೇ ಜನಿಸಿದ್ದ ಕೃಷ್ಣ ಭಾರತಿ ಅವರು, ಮಹಾತ್ಮ ಗಾಂಧಿಯವರೊಂದಿಗೂ ಒಡನಾಟ ಹೊಂದಿದ್ದರು. ಅವಿವಾಹಿತರಾಗಿಯೇ ಉಳಿದಿದ್ದ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.