ಸಿಂಗಪುರ: ಭಾರತ ಮೂಲದ ಲೇಖಕಿ ಮತ್ತು ನಾಟಕ ರಚನಕಾರ್ತಿ ಕಮಲಾದೇವಿ ಅರವಿಂದನ್ ಅವರು ಸಿಂಗಪುರದ 'ವುಮೆನ್ಸ್ ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾಗಿದ್ದಾರೆ. ಆರು ಮಂದಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಇದರೊಂದಿಗೆ, 2014ರಿಂದ ಈಚೆಗೆ 198 ಮಹಿಳೆಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಿಂಗಪುರದ ಮಹಿಳಾ ಸಂಘಟನೆಗಳ ಮಂಡಳಿಯು ಈ ಪ್ರಶಸ್ತಿಯನ್ನು ನೀಡುತ್ತದೆ. ಲಿಂಗ ಸಮಾನತೆಯಲ್ಲಿನ ಪ್ರಗತಿ, ಸಿಂಗಪುರದ ಇತಿಹಾಸ, ಸಮಾಜ ಮತ್ತು ಪ್ರಗತಿಗೆ ನೀಡುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
ಅರವಿಂದನ್ ಅವರು ತಮಿಳು ಮತ್ತು ಮಲಯಾಳ ಲೇಖಕಿಯಾಗಿದ್ದು, ಅವರ ಕೆಲವು ಬರಹಗಳು ಇಂಗ್ಲಿಷ್ ಭಾಷೆಗೆ ತರ್ಜುಮೆಯಾಗಿವೆ.
ಅವರ 160 ಸಣ್ಣಕತೆಗಳು, 18 ನಾಟಕಗಳು, 300 ರೇಡಿಯೊ ನಾಟಕಗಳು ಮತ್ತು ಐದು ಪುಸ್ತಕಗಳು ಪ್ರಕಟವಾಗಿವೆ.