HEALTH TIPS

ಎಣ್ಮಕಜೆ ಗ್ರಾ. ಪಂ.ನ ಎರಡು ಎಫ್‍ಎಚ್‍ಸಿಗಳಲ್ಲಿ ಶಾಶ್ವತ ವೈದ್ಯರ ನೇಮಕಾತಿಗೆ ಆರೋಗ್ಯ ಸಚಿವೆಗೆ ಸೋಮಶೇಖರ್ ಜೆ.ಎಸ್. ಆಗ್ರಹ

ಪೆರ್ಲ: ಎಎಣ್ಮಕಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರ್ಲ, ವಾಣಿನಗರ ಕುಟುಂಬ ಆರೋಗ್ಯ ಕೇಂದ್ರ (ಎಫ್‍ಎಚ್‍ಸಿ)ಗಳಲ್ಲಿ ಸಮರ್ಪಕ ವೈದ್ಯರ ಸೇವೆಯ ಕೊರತೆಯಿಂದ ಬಳಲುತ್ತಿದ್ದು ಇದಕ್ಕೆ ಶೀಘ್ರವೇ ನೇಮಕಾತಿ ನಡೆಸಿ ಪರಿಹಾರ ಕಾಣಬೇಕೆಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಆರೋಗ್ಯ ಸಚಿವೆ ವೀಣಾ ಜಾರ್ಜ್‍ರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ. 

ಎಂಡೋಸಲ್ಫಾನ್ ಬಾಧಿತ ಪ್ರದೇಶವಾಗಿರುವ ಪಡ್ರೆ, ವಾಣಿನಗರ ಭಾಗದ ಜನ ಸಾಮಾನ್ಯರೇ ಹೆಚ್ಚು ಅವಲಂಬಿಸಿರುವ  ಎಫ್‍ಎಚ್‍ಸಿಗಳಲ್ಲಿ ಈ ಪರಿಸ್ಥಿತಿ ಉಂಟಾಗಿದ್ದು  ಈ ಕುರಿತು ಪಂಚಾಯಿತಿಗೆ  ಹಲವು ದೂರುಗಳು ಬರುತ್ತಿದೆ. ಪೆರ್ಲ ಎಫ್‍ಎಚ್‍ಸಿಯಲ್ಲಿ  ಇಬ್ಬರು ವೈದ್ಯರ ಬದಲಿಗೆ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಿದೆ. ವೈದ್ಯಾಧಿಕಾರಿಗಳ ಕರ್ತವ್ಯ ಮತ್ತು ಇತರ ಯೋಜನೆ ಅನುμÁ್ಠನಗಳಿಂದಾಗಿ ವೈದ್ಯರು ರೋಗಿಗಳನ್ನು ಎಲ್ಲಾ ಸಮಯದಲ್ಲೂ ಪರೀಕ್ಷಿಸಲು ಸಾಧ್ಯವಾಗದಿರುವ ಪರಿಸ್ಥಿತಿಯು ತಲೆದೋರುತ್ತಿದೆ.

ಪೆರ್ಲ ಎಫ್‍ಎಚ್‍ಸಿಗೆ ಪ್ರತಿನಿತ್ಯ 150ಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಬರುತ್ತಾರೆ ಇಲ್ಲಿ ಪ್ರಸ್ತುತ ಒಬ್ಬ ಫಾರ್ಮಸಿಸ್ಟ್ ಸೇವೆ ಇದ್ದು, ಇಬ್ಬರು ಫಾರ್ಮಸಿಸ್ಟ್‍ಗಳ ಅಗತ್ಯವಿದೆ. ಎರಡು ವರ್ಷಗಳ ಹಿಂದೆ ಪೆರ್ಲ ಎಫ್ ಎಚ್ ಸಿಯಲ್ಲಿ ಸಂಜೆ ಒಪಿ ಸೇವೆಯನ್ನು ಪಂಚಾಯತಿ ಯೋಜನೆಗೊಳಪಡಿಸಿ ಪಂಚಾಯಿತಿ ವತಿಯಿಂದ ಒರ್ವ ವೈದ್ಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಬಳಿಕದ ಸಂದರ್ಭದಲ್ಲಿ ಉಂಟಧ ವೈದ್ಯರ ಕೊರತೆಯಿಂದ ಸಂಜೆ ಒಪಿಗೆ ನೇಮಕಗೊಂಡ ವೈದ್ಯರು ಬೆಳಗ್ಗೆಯೇ ರೋಗಿಗಳನ್ನು ತಪಾಸಣೆ ಮಾಡಬೇಕಾದ ಸಂದಿಗ್ದವಾಸ್ಥೆ ನಿರ್ಮಾಣವಾಯಿತು.

ಇದರಿಂದ ಸಂಜೆ ಒಪಿ ಮೂಲಕ ಆರಂಭಿಸಿರುವ ಪಂಚಾಯಿತಿ ಯೋಜನೆಯನ್ನು ಸಮರ್ಪಕವಾಗಿ  ನಡೆಸಲು ಸಾಧ್ಯವಾಗದ ಸ್ಥಿತಿ ಉಂಟಾಯಿತು.  ಅಂತೆಯೇ ವಾಣಿನಗರ ಎಫ್‍ಎಚ್‍ಸಿಗೆ ಕೇರಳ ಸರ್ಕಾರವು ಒಂದು ಕೋಟಿ ರೂ ವೆಚ್ಚದಲ್ಲಿ ಹೊಸ ಕಟ್ಟಡ ಸೌಲಭ್ಯಗಳು ಮತ್ತು ಇತರ ಪೂರಕ ಸೇವೆಗಳನ್ನು ಒದಗಿಸಿದ್ದರೂ ಇಲ್ಲಿಯೂ ವೈದ್ಯರೂ ಇಲ್ಲದಿರುವುದು ಎಫ್‍ಎಚ್‍ಸಿ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ಹೆಸರಿಗೆ ಎಫ್‍ಎಚ್‍ಸಿ ಎಂದಿದ್ದರೂ ಒಬ್ಬನೇ ಒಬ್ಬ ರೋಗಿಯನ್ನೂ ತಪಾಸಣೆಯನ್ನು ನಡೆಸುವ  ವೈದ್ಯರು ಇಲ್ಲದಿರುವುಂದಾಗಿ  ಈಊಅ ಗೆ ಬಂದಂತಹ ರೋಗಿಗಳು ನಿರಾಶೆಯಿಂದ ಹಿಂತಿರುಗಬೇಕಾಗುತ್ತದೆ. ಇಲ್ಲಿ ಲ್ಯಾಬ್ ಆರಂಭಿಸಲು ಅಗತ್ಯವಿರುವ ಮಿಷನ್ ಸಲಕರಣೆಗಳು ಬಂದಿವೆಯಾದರೂ   ಇನ್ನೂ ಕಾರ್ಯಾಚರಣೆ ಆರಂಭಿಸಿಲ್ಲ.

ಆದ್ದರಿಂದ ಪೂರ್ಣ ಸಮಯದ ವೈದ್ಯರ ಸೇವೆ ಮತ್ತು ಲ್ಯಾಬ್ ಸೌಲಭ್ಯಗಳನ್ನು ಒದಗಿಸಲು ತುರ್ತು ಕ್ರಮದ ಅಗತ್ಯವಿದೆ.

ಪೆರ್ಲ ಎಫ್‍ಎಚ್‍ಸಿ ಮತ್ತು ವಾಣಿನಗರ ಎಫ್‍ಎಚ್‍ಸಿ ಎಫ್‍ಎಚ್‍ಸಿ ದುಸ್ಥಿತಿಯನ್ನು ಬದಲಾಯಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆರೋಗ್ಯ ಸಚಿವರಿಗೆ ಕಳುಹಿಸಿದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries