ಮಲಪ್ಪುರಂ: ವಳಂಚೇರಿಯ ಮಾದಕವಸ್ತು ತಂಡದ ಒಂಬತ್ತು ಜನರಿಗೆ ಎಚ್‍ಐವಿ ಪಾಸಿಟಿವ್ ಇರುವುದು ದೃಢÀಪಟ್ಟಿದೆ. ಅವರಲ್ಲಿ ಮೂವರು ಇತರ ರಾಜ್ಯಗಳ ಕಾರ್ಮಿಕರು.
ಒಂದೇ ಸಿರಿಂಜ್ ಬಳಸಿ ಡ್ರಗ್ಸ್ ಸೇವನೆಯಿಂದ ಈ ರೋಗ ಹರಡಿತು. ಕೇರಳ ಏಡ್ಸ್ ಸೊಸೈಟಿ ನಡೆಸಿದ ತಪಾಸಣೆಯ ಸಮಯದಲ್ಲಿ ಎಚ್ಐವಿ ಸೋಂಕು ಪತ್ತೆಯಾಗಿದೆ.
ಈ ಮಾಹಿತಿಯು ಕೇರಳದ ಆರೋಗ್ಯ ಕ್ಷೇತ್ರಕ್ಕೆ ಆಘಾತಕಾರಿಯಾಗಿದೆ. ಲೈಂಗಿಕ ಕಾರ್ಯಕರ್ತರು ಮತ್ತು ಮಾದಕವಸ್ತು ಸೇವಿಸುವ ತಂಡಗಳ ಸದಸ್ಯರಾಗಿರುವ ಜನರ ಮೇಲೆ ತಪಾಸಣೆ ನಡೆಸಲಾಗಿತ್ತು. ಎಚ್ಐವಿ ಇರುವುದು ದೃಢಪಟ್ಟ ಮೊದಲ ವ್ಯಕ್ತಿ ವಳಂಚೇರಿಯವ. ಆರೋಗ್ಯ ಇಲಾಖೆಯು ಮಾದಕವಸ್ತು ತಂಡದ ಮೇಲೆ ಕೇಂದ್ರೀಕರಿಸಿದ ತಪಾಸಣೆ ಬಳಿಕ ತನಿಖೆಯ ಮೂಲಕ ತಪಾಸಣೆಯಲ್ಲಿ ಎಚ್.ಐ.ವಿ. ದೃಢಪಟ್ಟಿತು. ಇತರರನ್ನು ಏಡ್ಸ್ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲೂ ಈ ವೈರಸ್ ಕಂಡುಬಂದಿದೆ ಎಂದು ಡಿಎಂಒ ದೃಢಪಡಿಸಿದ್ದಾರೆ.
ಆರೋಗ್ಯ ಇಲಾಖೆ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿದೆ. ಇದು ಎಚ್ಐವಿ ಸೋಂಕಿನ ಪ್ರಮಾಣವನ್ನು ಹೆಚ್ಚಿಸಬಹುದು. ಕೇರಳದಲ್ಲಿ ಮಾದಕ ದ್ರವ್ಯ ಸೇವನೆ ಪರಿಣಾಮ ಹೆಚ್ಚುತ್ತಿರುವಂತೆ ಎಚ್‍ಐವಿ ಹರಡುವಿಕೆಯೂ ಬೆದರಿಕೆಯಾಗಿದೆ.