ಮುಳ್ಳೇರಿಯ: ಕನ್ನಡದ ಯುವಪೀಳಿಗೆಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟು, ಅವರನ್ನು ಕನ್ನಡದ ಮುಖ್ಯವಾಹಿನಿಗೆ ಕರೆತರುವ ಕೆಲಸ ನಡೆಸದಿದ್ದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಅಸಾಧ್ಯ ಎಂದು ಹಿರಿಯ ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಹೇಳಿದರು.
ಅವರು ದೇಲಂಪಾಡಿಯ ಬನಾರಿ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಬನಾರಿಯ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸಹಕಾರದಲ್ಲಿ ನಡೆದ 'ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಸ್ಮರಣಾಂಜಲಿ' ಅಂಗವಾಗಿ ಆಯೋಜಿಸಲಾಗಿದ್ದ ಚುಟುಕು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ದೇಲಂಪಾಡಿ ಶಾಲಾ ವಿದ್ಯಾರ್ಥಿಗಳಾದ ಶಿಲ್ಪಾ ಎಂ, ಯಮಿತಾ, ಹನಿ ಬಿ. ಪೂಜಸ್ವಿ ಎಂ, ಶ್ರಾವ್ಯಶ್ರೀ, ಚೈತ್ರಾಲಿ, ಅದಿತಿ ಹಾಗೂ ಮುಕ್ತ ವಿಭಾಗದಲ್ಲಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಆದ್ಯಂತ್ ಅಡೂರು. ಪವಿತ್ರ ಎಂ ಬೆಳ್ಳಿಪ್ಪಾಡಿ, ಶಶಿಕಲಾ ಟೀಚರ್ ಕುಂಬಳೆ, ಕೆ ಎಸ್ ದೇವರಾಜ್ ಆಚಾರ್ಯ ಸೂರಂಬೈಲ್, ಚಿತ್ರಕಲಾ ದೇವರಾಜ್ ಆಚಾರ್ಯ ಸೂರಂಬೈಲ್. ಎಂ ಎ ಮುಸ್ತಫಾ ಬೆಳ್ಳಾರೆ, ಶಾರದಾ ಮೊಳೆಯಾರ್ ಎಡನೀರು, ಅಪೂರ್ವ ಕಾರಂತ್ ಪುತ್ತೂರು, ಶೇಖರ ಎಂ ದೇಲಂಪಾಡಿ, ಪೂರ್ಣಿಮಾ ಕಾರಿಂಜ, ವಿಜಯರಾಜ ಪುಣಿಂಚಿತ್ತಾಯ, ಬೆಳ್ಳೂರು, ಗಿರೀಶ್ ಪೆರಿಯಡ್ಕ, ಪೂಜಾ ಸಿ ಎಚ್, ಅನಿತಾ ಗಣೇಶ್ ಸೀತಾಂಗೋಳಿ, ಅನಿತಾ ಶೆಣೈ ಮಂಗಳೂರು ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ರಮಾನಂದ ಬನಾರಿ, ವಿಶ್ವವಿನೋದ ಬನಾರಿ, ನಂದಕಿಶೋರ ಬನಾರಿ, ಪೂರ್ಣಿಮಾ ಬನಾರಿ, ಚಂದ್ರಶೇಖರ ಏತಡ್ಕ, ಜಯಾನಂದ ಪೆರಾಜೆ, ಡಾ. ಶಾಂತಾ ಪುತ್ತೂರು, ಡಿ. ರಾಮಣ್ಣ ಮಾಸ್ತರ್, ಜಲಜಾಕ್ಷಿ ರೈ, ಡಾ. ವಾಮನ್ ರಾವ್ ಬೇಕಲ್, ಸಂದ್ಯಾರಾಣಿ ಟೀಚರ್, ಕೊಳ್ಚಪ್ಪೆ ಗೋವಿಂದ ಭಟ್, ಅಪೂರ್ವ ಕಾರಂತ್ ಪುತ್ತೂರು, ಉದ್ಯಮಿ ಗೋಪಾಲಕೃಷ್ಣ ಭಟ್ ಪುತ್ತೂರು ಉಪಸ್ಥಿತರಿದ್ದರು. ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘಟಕ ವಸಂತ ಕೆರೆಮನೆ ವಂದಿಸಿದರು.