HEALTH TIPS

ಕೇರಳ ಕರಾಳ ಯುಗದತ್ತ ಸಾಗುತ್ತಿದೆ: ಪಿ.ಎಸ್. ಶ್ರೀಧರನ್ ಪಿಳ್ಳೈ

Top Post Ad

Click to join Samarasasudhi Official Whatsapp Group

Qries

ಕಾಯಂಕುಳಂ: ಕೇರಳವು ಕರಾಳ ಯುಗದತ್ತ ಸಾಗುತ್ತಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಹೇಳಿಸದ್ದಾರೆ. 

ಡಿ. ಅಶ್ವನಿ ದೇವ್ ಪ್ರತಿಷ್ಠಾನ ಆಯೋಜಿಸಿದ್ದ ಮೊದಲ ಅಶ್ವನಿ ದೇವ್ ಸ್ಮಾರಕ ದಿನವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದು, ನಕಾರಾತ್ಮಕತೆಯಿಂದ ಸಂಪೂರ್ಣವಾಗಿ ಮುಕ್ತರಾಗಿದ್ದ ಶ್ರೀ ನಾರಾಯಣ ಗುರುಗಳು ಸಹ ಮನಸ್ಸಿನಲ್ಲಿ ನಕಾರಾತ್ಮಕತೆಯನ್ನು ಹೊಂದಿದ್ದರು ಎಂದು ಪ್ರಚಾರ ಮಾಡುವ ಸಮಾಜವಿದು. ನಾವು ಓದುವ ಮೂಲಕ ಸಂಸ್ಕøತಿಯನ್ನು ಬೆಳೆಸಬೇಕು. ಕಾಯಂಕುಳಂ ಇಡೀ ಕೇರಳ ರಾಜ್ಯಕ್ಕೆ ಕೊಡುಗೆ ನೀಡಿದ ಇತಿಹಾಸ ಪ್ರಸಿದ್ದ ಭೂಮಿ. ಕಾಯಂಕುಳಂ ಕತ್ತಿ ಅದಕ್ಕೆ ಒಂದು ಉದಾಹರಣೆ. ಕಾಯಂಕುಳಂನ ರಾಜಕೀಯ ಇತಿಹಾಸವು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದೆ. ಇದು ದೇಶಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡವರ ಭೂಮಿ ಕೂಡ. ಪುತ್ತುಪ್ಪಳ್ಳಿ ರಾಘವನ್ ಅವರ ಇತಿಹಾಸವು ಇದನ್ನು ಬಹಿರಂಗಪಡಿಸುತ್ತದೆ. ಇತಿಹಾಸವನ್ನು ಮರೆತು ನಾವು ಮರೆವಿನತ್ತ ಮುಳುಗುತ್ತಿದ್ದೇವೆ. ವೈಕಂ ಸತ್ಯಾಗ್ರಹದಂತಹ ಅನೇಕ ಐತಿಹಾಸಿಕ ಘಟನೆಗಳನ್ನು ವಾಸ್ತವಿಕವಾಗಿಸದೆ ವಿರೂಪಗೊಳಿಸಿ ಪ್ರತಿಕ್ರಿಯಿಸಲು ಯಾರೂ ಇಲ್ಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ.  ಈ ಅವಧಿಯಲ್ಲಿ ಸಂಘ ಚಳವಳಿಯ ಮಾರ್ಗದರ್ಶಕರಾದ ಪರಮೇಶ್ವರ್‍ಜಿ ಅವರನ್ನು ಸ್ಮರಿಸಬೇಕು. ಒಬ್ಬ ಸಾರ್ವಜನಿಕ ಸೇವಕನಿಗೆ ಬೇಕಾಗಿರುವುದು ಅಧಿಕಾರವಲ್ಲ, ಸಾರ್ವಜನಿಕ ಕಲ್ಯಾಣ ಕಾರ್ಯ. ಸಾರ್ವಜನಿಕ ಸೇವಕರಾಗಿ, ಡಿ. ಅಶ್ವನಿದೇವ್ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಅವರು ಹೇಳಿದರು.

ಎಸ್‍ಎನ್ ಟ್ರಸ್ಟ್ ಸದಸ್ಯೆ ಪ್ರೀತಿ ನಟೇಶನ್ ದೀಪ ಬೆಳಗಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಅಡ್ವ. ಎಸ್. ರಮಣನ್ ಪಿಳ್ಳೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸೀಮಾ ಜಾಗರಣ್ ಮಂಚ್ ಅಖಿಲ ಭಾರತ ಪೋಷಕ ಎ. ಗೋಪಾಲಕೃಷ್ಣನ್, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಶಾಸಕಿ ಅಡ್ವ. ಯು. ಪ್ರತಿಭಾ ಮತ್ತು ರಾಜೀವ್ ಅಲುಂಕಲ್ ಸಂಸ್ಮರಣಾ ಭಾಷಣ ಮಾಡಿದರು. ಸಂಘಟನಾ ಸಮಿತಿಯ ಸಂಚಾಲಕ ಬಿ. ಶ್ರೀಪ್ರಕಾಶ್ ಸ್ವಾಗತಿಸಿ ವಂದಿಸಿದರು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries