ಮಂಜೇಶ್ವರ: ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಾ.30 ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮುಡಿಪುವಿನ ಮುಡಿಪಿನ್ನಾರ್ ಕ್ಷೇತ್ರದಲ್ಲಿ ಹೊರೆಕಾಣಿಕೆ ಸಂಗ್ರಹ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ನಡೆಯಿತು.
ಈ ಸಂದರ್ಭದಲ್ಲಿ ಕೂಟತ್ತಜೆ ಕ್ಷೇತ್ರದ ಶೈಲೇಂದ್ರ ಭರತ್ ನಾಯ್ಕ್, ಮುಡಿಪಿನ್ನಾರ್ ಕ್ಷೇತ್ರದ ಮನು ವೆಂಕಟೇಶ್ ಭಟ್, ಬಿಜೆಪಿ ಮಂಡಲ ಅಧ್ಯಕ್ಷ ರಾದ ಜಗದೀಶ್ ಆಳ್ವ ಕುವ್ವತ್ತಬೈಲ್, ಮುಖಂಡರಾದ ಸಂತೋμï ಕುಮಾರ್ ರೈ ಬೋಳಿಯಾರ್, ಜಯರಾಮ್ ಶೆಟ್ಟಿ ಕಂಬಳದವು, ಕಿರಣ್ ಶೆಟ್ಟಿ ಕುರ್ಮಾನ್ ಬೀಡು, ನವೀನ್ ಪಾದಲ್ಪಾಡಿ, ತಾರನಾಥ ಜೋಗಿ ಕೂಟತ್ತಾಜೆ, ಹರೀಶ್ ಶೆಟ್ಟಿ ಪಾವುಲ, ಭುಜಂಗ ಜೋಗಿ ಕಣಂತೂರು, ಹರೀಶ್ ಕೂಟತ್ತಜೆ, ಉಗ್ಗಪ್ಪ ಮಾಣೈ ಬೀರೂರು, ಸತೀಶ್ ಜೋಗಿ ಬದಿಯಾರು, ನವೀನ್ ಆಚಾರ್ಯ ಮುಡಿಪು ಮೊದಲಾದವರು ಉಪಸ್ಥಿತರಿದ್ದರು.