ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾಷಿಕ ಜಾತ್ರಾ ಮಹೋತ್ಸವಕ್ಕೆ ಬುಧವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದೇವಸ್ಥಾನದ ಅಡಳಿತ ಸಮಿತಿ ಪದಾದಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ಮಹಾಪೂಜೆಯೊಂದಿಗೆ ಉತ್ಸವಬಲಿ, ಭಜನೆ, ತಾಯಂಬಕಂ ನಡೆಯಿತು.
20ರಂದು ಬೆಳಗ್ಗೆ ಉತ್ಸವಬಲಿ, ಭಜನೆ, ಸಂಜೆ 7ಕ್ಕೆ ರಂಗಪೂಜೆ, ನಡುದೀಪೋತ್ಸವ ನಡೆಯುವುದು. 21ರಂದು ಉತ್ಸವಬಲಿ, ಭಜನೆ, ಸಂಜೆ ಕಟ್ಟೆಪೂಜೆ, 22ರಂದು ಬೆಳಗ್ಗೆ ಉತ್ಸವಬಲಿ, ಸಂಗೀತ ಕಛೇರಿ, ಸಂಜೆ 7ರಿಂದ ಉತ್ಸವಬಲಿ, ಕಟ್ಟೆಪೂಜೆ, ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ, ಶ್ರೀದೇವರ ಶಯನ ನಡೆಯುವುದು. 23ರಂದು ಬೆಳಗ್ಗೆ 9.05ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಭಿಷೇಕ, 11ಕ್ಕೆ ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ 4.30ಕ್ಕೆ ಚೆಂಡೆಮೇಳ ರಂಗಪ್ರವೇಶ, ಸಂಜೆ 6ಕ್ಕೆ ರಾಥ್ರಿ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.