ಕಾಸರಗೋಡು: ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ವಾಹನ ಚಾಲಕರಿಗೆ ಸುಂದರ ಕಂಠದೊಂದಿಗೆ ಸೂಚನೆಗಳನ್ನು ನೀಡುತ್ತಿರುವ ರಾಘವನ್ ಮಾಸ್ಟರ್ ಗಮನ ಸೆಳೆಯುತ್ತಿದ್ದಾರೆ. ದೇವಸ್ಥಾನದ ಎದುರಿನ ದ್ವಾರದ ಸನಿಹವಿರುವ ಚಪ್ಪರದಲ್ಲಿ ಮೈಕ್ ಅನೌನ್ಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಘವನ್ ಮಾಸ್ಟರ್ ಅವರ ಕಂಠದ ಪರಿಚಯ ಇಲ್ಲದವರು ವಿರಳ. ದೇವಾಲಯಗಳ ಬ್ರಹ್ಮಕಲಶ, ಉತ್ಸವಗಳ ಸಂದರ್ಭ ಉದ್ಘೋಷಕರಾಗಿ ಕರ್ತವ್ಯ ನಿರ್ವಹಿಸುವ ರಾಘವನ್ ಅವರು ನಿವೃತ್ತ ಶಿಕ್ಷಕರು. ಮಾಯಿಪ್ಪಾಡಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶೀಕ್ಷಕರಾಗಿದ್ದ ಇವರು, ಬಿಆರ್‍ಸಿ ಟ್ರೈನರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. 2004ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ನಂತರ ಸೇವಾ ರೂಪದಲ್ಲಿ ಉದ್ಘೋಷಕರಾಗಿ ಕಂಠದಾನ ನೀಡುತ್ತಿದ್ದಾರೆ. ಭಕ್ತಾದಿಗಳ ಸಂಚಾರ, ಭಕ್ತರು ಚಪ್ಪಲಿ ಇರಿಸುವುದು, ವಾಹನಗಳ ನಿಲುಗಡೆ, ಭಕ್ತಾದಿಗಳಿಗೆ ಆಹಾರ ಒದಗಿಸುವ ಚಪ್ಪರಗಳ ಬಗ್ಗೆ ಸೂಚನೆ, ಆಹಾರ ಪೂರ್ಯಕೆ ಸಮಯದ ಬಗ್ಗೆ ವಿವರವಾಗಿ ಹಾಗೂ ಅಚ್ಚುಕಟ್ಟಾಗಿ ಅನೌನ್ಸ್ ನಡೆಸುವ ಮೂಲಕ ರಾಘವನ್ ಮಾಸ್ಟರ್ ಭಕ್ತಾದಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯವೆಸಗುತ್ತಿದ್ದಾರೆ.
ಸ್ವಯಂಸೇವಕರ ನಿಸ್ವಾರ್ಥ ಸೇವೆ:
ಪ್ರತಿದಿನ ನೂರಾರು ಸಂಕ್ಯೆಯಲ್ಲಿ ಸ್ವಯಂಸೇವಕರು ದೇವಸ್ಥಾನಕ್ಕೆ ಆಗಮಿಸಿ ಸೇವಾ ಚಟುವಟಿಕೆಗಳಲ್ಲಿ ನಿರತರಾಘುತ್ತಿದ್ದಾರೆ. ತರಕಾರಿ ಹಚ್ಚುವುರು, ಶುಚೀಕರಣ, ಪಾತ್ರೆ ತೊಳೆಯುವುದು, ಆಹಾರ ಬಡಿಸುವುದು, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ನಾನಾ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಭಕ್ತಾದಿಗಳಿಗೆ ಬಫೆ ಜತೆಗೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗಿದ್ದು, ಸ್ವಯಂಸೇವಕರು ಬಡಿಸುವ ವ್ಯವಸ್ಥೆಯನ್ನುಅ ಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಆರೋಗ್ ಇಲಾಖೆಯ ಪ್ರತ್ಯೇಕ ಸೂಚನೆ ಮೇರೆಗೆ ಕುದಿಸಿ ತಣಿಸಿದ ನೀರನ್ನೇ ಭಕ್ತಾದಿಗಳಿಗೆ ಪೂರೈಸಲಾಗುತ್ತಿದ್ದು, ಇದಕ್ಕಾಗಿ ಅಲ್ಲಲ್ಲಿ ಗ್ಯಾಸ್ ಸ್ವೌ ಅಳವಡಿಸಿ ಬೃಹತ್ ಪಾತ್ರೆಗಳಲ್ಲಿ ನೀರು ಬಿಸಿಮಾಡಲಗುತ್ತಿದೆ.
ಬಿಗು ಪೊಲೀಸ್ ಬಂದೋಬಸ್ತ್:
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಶಿಲ್ಪಾ ಡಿ. ಅವರ ನಿರ್ದೇಶ ಮೇರೆಗೆ ದೇವಸ್ಥಾನದೊಳಗೆ ಹಾಗೂ ಆಸುಪಾಸು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರತ್ಯೇಕ ಪಒಲೀಸ್ ಕೌಂಟರ್ ಆರಂಭಿಸಲಾಗಿದೆ. ಇನ್ನು ಆರೋಗ್ಯ ಇಲಾಖೆಯಿಂದ ವಿಶೇಷ ಕೌಂಟರ್ ಮೂಲಕ ಭಕ್ತಾದಿಗಳ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತಿದೆ.