HEALTH TIPS

ಬೆಳಗ್ಗೆ ಏಳುವಾಗ ತಲೆ ನೋವು ಕಾಡುತ್ತಿದ್ಯಾ? ಇದಕ್ಕೆ ಕಾರಣವೇನು ಗೊತ್ತಾ?

Top Post Ad

Click to join Samarasasudhi Official Whatsapp Group

Qries

 ನೀವು ಬೆಳಗ್ಗೆ ನಿದ್ರೆಯಿಂದ ಏಳುವ ಮುನ್ನ ತಲೆನೋವು ಎದುರಿಸುತ್ತೀರಾ? ಏಳುವಾಗ ತಲೆ ಬಾರವಾದ ರೀತಿಯಲ್ಲಿ ನಿಮಗೆ ತಲೆನೋವು ಕಾಡುತ್ತಿರುತ್ತದೆಯೇ? ಅದರಲ್ಲೂ 30 ವರ್ಷ ದಾಟಿದ ಮಂದಿ ಈ ರೀತಿಯ ತಲೆ ನೋವು ಎದುರಿಸುವುದು ನೋಡಬಹುದು. ಹೀಗಾಗಿ ಇಡೀ ದಿನ ತಲೆನೋವಿನ ಸಮಸ್ಯೆಯಿಂದ ನೀವು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅದರಲ್ಲೂ ತಲೆನೋವು ನಿಮ್ಮ ಇಡೀ ದಿನವನ್ನೇ ಹಾಳುಮಾಡಬಹುದು.

ಈ ರೀತಿ ತಲೆನೋವು ಬೇಳಗ್ಗೆ ಏಳುವುದಕ್ಕೂ ಮುನ್ನವೇ ಕಾಡುವುದೇಕೆ? ಇದು ಯಾವ ಅನಾರೋಗ್ಯದ ಲಕ್ಷಣ ಎಂಬುದು ನಿಮಗೆ ಗೊತ್ತಾ? ನಿಮ್ಮ ಮೆದುಳು ಎಚ್ಚರವಾಗಲು ಆರಂಭಿಸಿದಾಗ ನರಗಳ ಸಂವೇದನ ಉಂಟಾಗುತ್ತದೆ. ಇದು ತಲೆ ನೋವಿಗೆ ಕಾರಣವಾಗುತ್ತಿದೆ. 13 ಜನರಲ್ಲಿ ಒಬ್ಬರಿಗೆ ಈ ರೀತಿ ಬೆಳಗಿನ ಹೊತ್ತು ತಲೆನೋವು ಕಾಡುವುದು ನೋಡಬಹುದಂತೆ.



ಹಲ್ಲು ಕಡಿಯುವುದು

ರಾತ್ರಿ ಮಲಗಿದ್ದ ಸಮಯದಲ್ಲಿ ಹಲ್ಲು ಕಡಿಯುವ ಅಭ್ಯಾಸ ಇದ್ದವರಿಗೆ ಈ ರೀತಿ ತಲೆನೋವಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ತಿಳಿದುಬಂದಿದೆ. ಹಲ್ಲಿನ ನರಗಳು ನೇರವಾಗಿ ತಲೆಗೆ ಸಂಬಂಧಿಸಿರುವುದರಿಂದು ತಲೆ ನೋವಿಗೆ ಕಾರಣವಾಗುತ್ತಿದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಗಟ್ಟಿ ಪದಾರ್ಥಗಳ ಸೇವನೆ ಇದಕ್ಕೆ ಕಾರಣವಾಗಲಿದೆ. ಇದನ್ನು ಬ್ರಕ್ಸಿಸಮ್ ಎಂದು ಕರೆಯಲಾಗುತ್ತದೆ. ನೀವು ಹಲ್ಲು ಕಡಿಯುವಾಗ, ನೀವು ಸ್ನಾಯುಗಳು, ಅಂಗಾಂಶಗಳು ಮತ್ತು ನಿಮ್ಮ ದವಡೆಯ ಇತರ ಭಾಗಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ. ಇದು ಮೆದುಳಿನ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ನಿಮ್ಮ ತಲೆನೋವಿಗೆ ಕಾರಣವಾಗುತ್ತದೆ.

ನಿದ್ರೆಯ ಸಮಸ್ಯೆಗಳು

ಬೆಳಗ್ಗೆ ಏಳುವಾಗ ತಲೆನೋವು ಕಾಡಲು ಮತ್ತೊಂದು ಕಾರಣ ಏನೆಂದರೆ ನಿಮಗೆ ರಾತ್ರಿ ಸಮಯದಲ್ಲಿ ನಿದ್ರೆ ಬಾರದೆ ಇರುವುದು. ನಿದ್ರೆಯ ಕೊರತೆಯು REM ಅಥವಾ ತ್ವರಿತ ಕಣ್ಣಿನ ಚಲನೆಗೆ ಸಂಬಂಧಿಸಿದೆ, ಇದು ತಲೆನೋವಿಗೆ ಕಾರಣವಾಗುತ್ತದೆ. REM ನಿದ್ರೆ ರಾತ್ರಿಯಿಡೀ 90 ರಿಂದ 120 ನಿಮಿಷಗಳ ಮಧ್ಯಂತರದಲ್ಲಿ ಸಂಭವಿಸುತ್ತದೆ. ಅಂದರೆ ನೀವು ನಿದ್ರೆಯ ಮಂಪರಿನಲ್ಲಿದ್ದರೂ ನಿಮ್ಮ ಕಣ್ಣಿನ ಚಲನೆ ಇರಲಿದೆ, ಇದು ಕೂಡ ನಿಮ್ಮಲ್ಲಿ ತಲೆನೋವಿಗೆ ಕಾರಣವಾಗುವ ಅಂಶವಾಗಿರಲಿದೆ. ಹಾಗೆ ನಿಮ್ಮಲ್ಲಿ ನಿದ್ರಾಹೀನತೆಯಂತಹ ಸಮಸ್ಯೆ ಇದ್ದರೂ ಕೂಡ ಅದು ಈ ಬೆಳಗ್ಗೆ ಸಮಯದಲ್ಲಿ ಕಾಡುವ ತಲೆನೋವಿಗೆ ಕಾರಣವಾಗಿರಲಿದೆ.

ಕೆಫೀನ್

ಬೆಳಗ್ಗೆ ಸಮಯಲ್ಲಿ ಕಾಡುವ ತಲೆನೋವಿಗೆ ಕೆಫೀನ್ ಅಂಶ ಕೂಡ ಕಾರಣವಾಗುತ್ತಿದೆ. ಕೆಫೀನ್ ನಿಮ್ಮ ದೇಹದಲ್ಲಿನ ಅಡೆನೊಸಿನ್ ಎಂಬ ವಸ್ತುವಿನ ಪತ್ತೆ ಮಾಡುವುದನ್ನು ತಡೆಯುತ್ತದೆ ಇದು ನಿದ್ದರೆ ತರಿಸುವ ಅಂಶವಾಗಿದೆ. ಆದ್ರೆ ಕೆಫೀನ್ ನಿಮ್ಮನ್ನು ಎಚ್ಚರವಾಗಿಡುವ ಅಂಶವಾಗಿದೆ. ಹೀಗಾಗಿ ಮಲಗುವ ಮುನ್ನ ಟೀ ಕುಡಿಯುವುದು ನಿದ್ರೆ ಹಾನಿ ಹಾಗೂ ಬೆಳಗ್ಗೆಯ ತಲೆನೋವಿಗೆ ಕಾರಣವಾಗುತ್ತದೆ.

ಮದ್ಯಪಾನ

ನಿಮಗೆ ಮದ್ಯಪಾನ ಮಾಡುವ ಅಭ್ಯಾಸ ಇದ್ದರೆ ನೀವು ಕೂಡ ಬೆಳಗ್ಗೆ ತಲೆನೋವಿನ್ನು ಎದುರಿಸಿರಬಹುದು. ಹೆಚ್ಚಿನವರಲ್ಲಿ ಈ ಮದ್ಯವು ತಲೆನೋವು ಹಾಗೂ ನರ ಹಾನಿಗೆ ಕಾರಣವಾಗುತ್ತದೆ. ರಾತ್ರಿ ಸಮಯದಲ್ಲಿ ನಿದ್ರೆ ಚೆನ್ನಾಗಿ ಬಂದರೂ ಬೆಳಗ್ಗೆಯ ಸಮಯದಲ್ಲಿ ತೀವ್ರ ಸ್ವರೂಪದ ತಲೆನೋವು ಕಾಡಬಹುದು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries