ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದ ಕಾಂಪ್ಲೆಕ್ಸ್ ಹಾಗೂ ವಸತಿಗಳಿಂದ ಹೊರಹರಿಯುವ ಕೊಳಚೆ ನೀರನ್ನು ಪ್ರತ್ಯೇಕ ಪೈಪು ಅಳವಡಿಸಿ ಕೋಟೆಕಣಿ ರಸ್ತೆಯ ಸನಿಹದ ಚೂರಿಯಲ್ಲಿ ಹರಿದು ಹೋಗುವ ತೋಡಿಗೆ ಹರಿಯಬಿಡುತ್ತಿರುವುದನ್ನು ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಸ್ಕ್ವೇಡ್ ಪತ್ತೆಹಚ್ಚಿ ಸಂಬಂಧಪಟ್ಟವರಿಂದ ದಂಡ ವಸೂಲಿ ಮಾಡಿದೆ. ಕೇರಳ ಪಂಚಾಯತ್ ರಾಜ್ ಕಾಯ್ದೆ-219 ರ ಅನ್ವಯ ಈ ದಂಡ ವಿಧಿಸಲಾಗಿದೆ.
ಕಾಂಪ್ಲೆಕ್ಸ್ ಮಾಲೀಕಗೆ 25ಸಾವಿರ ರೂ. ಹಾಗೂ ವಿವಿಧ ಕಟ್ಟಡಗಳಿಂದ ಮಲಿನ ನೀರು ತೋಡಿಗೆ ಹರಿಸಿರುವುದಕ್ಕೆ ತಕಾ 10ಸಾವಿರ ಹಾಗೂ ವ್ಯಾಪಾರಿ ಸಂಸ್ಥೆಗಳಿಗೆ ತಲಾ 5ಸಾವಿರ ರಊ. ದಂಡ ವಸೂಲಿ ಮಾಡಲಾಗಿದೆ. ಚೂರಿ ಆಸುಪಾಸಿನ ವಿವಿಧ ಮನೆಗಳಿಂದಲೂ ಮಲಿನ ನೀರನ್ನು ತೋಡಿಗೆ ಹರಿಯಬಿಡುತ್ತಿರುವುದನ್ನು ಎನ್‍ಫೋರ್ಸ್‍ಮೆಂಟ್ ಅದಿಕಾರಿಗಳು ಪತ್ತೆಹಚ್ಚಿದ್ದಾರೆ.
ಮಧೂರು ಗ್ರಾ.ಪಂ.ವ್ಯಾಪ್ತಿಯ ಚೂರಿ ಪ್ರದೇಶದ ತೋಡಿಗೆ ಮಲಿನ ನೀರು ಹರಿಯಬಿಡುತ್ತಿರುವುದರಿಂದ ಅಲ್ಲಲ್ಲಿ ಕೊಳಚೆನೀರು ಸಂಗ್ರಹಗೊಮಡು ವ್ಯಪಕ ದುರ್ವಾಸನೆ ಹಾಗೂ ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಲಭಿಸಿದ ದಊರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಒಂದು ವಾರದೊಳಗೆ ಮಲಿನ ನೀರು ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಲ್ಳಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಜಿಲ್ಲಾ ಎನ್‍ಫೋರ್ಸ್‍ಮೆಂಟ್ ಅಧಿಕಾರಿ ಕೆ.ವಿ.ಮುಹಮ್ಮದ್ ಮದನಿ, ನಗರಸಭೆ ಆರೋಗ್ಯ ನಿರೀಕ್ಷಕಿ ಆಶಾ ಮೇರಿ, ಪಂಚಾಯಿತಿ ಸಿಬ್ಬಂದಿ ಕೆ.ಅಶೋಕ್ ಕುಮಾರ್, ಸ್ಕ್ವಾಡ್ ಸದಸ್ಯ ಇ.ಕೆ ಫಾಸಿಲ್ ಮೊದಲದವರು ತಂಡದಲ್ಲಿದ್ದರು.