ಕಾಸರಗೋಡು: ಬೇಕಲ ಪೇಟೆ ಶಾರದಾಂಬಾ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಆರಂಭಗೊಂಡಿದ್ದು, ಮಾ.7ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. 108ಕಾಯಿ ಮಹಾಗಣಪತಿಹೋಮದೊಂದಿಗೆ ಉತ್ಸವ ಆರಂಭಗೊಂಡಿದ್ದು, ಪ್ರತಿದಿನ ವಿವಿಧ ಪೂಜೆ, ಹೋಮ ನಡೆಯಲಿದೆ. ಬೆಳಗ್ಗೆ 5.30ಕ್ಕೆ ಗಣಪತಿ ಹೋಮದ ನಂತರ ಪೀಠ ಪ್ರತಿಷ್ಠೆ ನಡೆಯಲಿದೆ. ನಂತರ ಕುಂಭೇಶ ಕಲಶಾಭಿಷೇಕ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ನಡೆಯಲಿದೆ. 7ರಮದು ಬೆಳಗ್ಗೆ 7.30ಕ್ಕೆ ಉಷಾಪೂಜೆ ನಂತರ ಸಹಸ್ರ ಕಲಶಾಭಿಷೇಕ ಹಾಗೂ ಬ್ರಹ್ಮಕಲಶಾಭಿಷೇಕ ನಡೆಯಲಿದೆ ಎಂದು ಆಚರಣಾ ಸಮಿತಿಯ ಪದಾಧಿಕಾರಿ ಎಸ್.ಎಲ್.ಭಾರದ್ವಾಜ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಧಾಕೃಷ್ಣ ಉಳಿಯತ್ತಡ್ಕ, ಪ್ರಭಾಕರ ಪಳ್ಳಿಕ್ಕೆರೆ ಉಪಸ್ಥಿತರಿದ್ದರು.