ಉಪ್ಪಳ: ಕುಟುಂಬಶ್ರೀ ಜಿಲ್ಲಾ ಮಿಶನ್ ಕಾಸರಗೋಡು, ಮಂಗಲ್ಪಾಡಿ ಸಿ.ಡಿ.ಎಸ್ ನ ನೇತೃತ್ವದಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನ ಮತ್ತು ಪ್ರಧಾನಮಂತ್ರಿ ವಿಮಾ ಅಭಿಯಾನದ ಕ್ಲಪ್ತಂ ಕಾರ್ಯಕ್ರಮ ಮುಳಿಂಜ ಜಿ.ಎಲ್.ಪಿ ಶಾಲೆಯಲ್ಲಿ ನಡೆಯಿತು. ಕೆನರಾ ಬ್ಯಾಂಕ್ ಉಪ್ಪಳ ಶಾಖೆಯ ಪ್ರಬಂಧಕ ಅಮರ್ ಎನ್. ವಿ ಪ್ರಧಾನಮಂತ್ರಿಯ ಜೀವವಿಮಾಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಫ್.ಎನ್.ಹೆಚ್ ನ ಎಗ್ರಿ ನ್ಯೂಟ್ರೀ ಗಾರ್ಡನ್ ತರಕಾರಿ ಕೃಷಿಯ ಬಗ್ಗೆ ತರಬೇತಿ ನೀಡಿ ತರಕಾರಿ ಬೀಜಗಳನ್ನು ವಿತರಿಸಲಾಯಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಮಂಗಲ್ಪಾಡಿಯ ಅಶ್ವತಿ, ಶಾಲಿನಿ, ರಂಜಿನಿ ಉಪಸ್ಥಿತರಿದ್ದರು. ಗ್ರಾ.ಪಂ. ಸಿ.ಡಿ.ಎಸ್ ಅಧ್ಯಕ್ಷೆ ಸಫೀನ ಸ್ವಾಗತಿಸಿ, ಕುಟುಂಬಶ್ರೀಯ ಉಪಾಧ್ಯಕ್ಷೆ ನಸೀಮ ವಂದಿಸಿದರು.