ನವದೆಹಲಿ: 'ಹುರಿಯತ್ ಕಾನ್ಫರೆನ್ಸ್‌ನ ಎರಡು ಘಟಕಗಳು ಪ್ರತ್ಯೇಕತಾವಾದದೊಂದಿಗೆ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸುವುದಾಗಿ ತಿಳಿಸಿವೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
'ಈ ನಡೆಯಿಂದ ಭಾರತದ ಏಕತೆಯಲ್ಲಿ ಬಲವರ್ಧನೆಯಾಗಲಿದೆ' ಎಂದು ಹೇಳಿದ್ದಾರೆ.
'ಮೋದಿ ಸರ್ಕಾರದ ಏಕೀರಣದ ನೀತಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಪ್ರತ್ಯೇಕತಾವಾದವು ಸಂಪೂರ್ಣವಾಗಿ ನಿರ್ನಾಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಅಭಿವೃದ್ಧಿ ಹೊಂದಿದ, ಏಕೀಕರಣದ ಭಾರತ ನಿರ್ಮಾಣದ ನಿಟ್ಟಿನಲ್ಲಿ ಬಹುದೊಡ್ಡ ಗೆಲುವಾಗಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಸಂಘಟನೆಗಳ ನೇತೃತ್ವವನ್ನು ಹುರಿಯತ್ ಕಾನ್ಫರೆನ್ಸ್ ವಹಿಸಿಕೊಂಡಿತ್ತು. ಇದರಲ್ಲಿದ್ದ ಬಹುಪಾಲು ಸಂಘಟನೆಗಳನ್ನು ಕೇಂದ್ರ ಸರ್ಕಾರವು ಈಗಾಗಲೇ ನಿಷೇಧಿಸಿದೆ.