ಕಾಸರಗೋಡು: ಮೀನುಗಾರಿಕೆ ಇಲಾಖೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮೆರೈನ್ ಡಾಟಾ ಸಂಗ್ರಹಣೆ ಮತ್ತು ಜುವೆನೈಲ್ ಮೀನುಗಾರಿಕೆ ಅಧ್ಯಯನದ ಸಮೀಕ್ಷೆಯ ಮಾಹಿತಿ ಸಂಗ್ರಹಣೆಗಾಗಿ ಒಂದು ವರ್ಷದ ಅರೆಕಾಲಿಕ ಎನುಮೆರೇಟರ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.
ಅರ್ಜಿದಾರರು ಮೀನುಗಾರಿಕೆ ವಿಜ್ಞಾನದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಯಸ್ಸಿನ ಮಿತಿ - 21-36 ಆಗಿದೆ. ಪ್ರಯಾಣ ಭತ್ಯೆ ಸೇರಿದಂತೆ ತಿಂಗಳಿಗೆ 25000 ರೂ ವೇತನ ನೀಡಲಾಗುತ್ತದೆ. ಅರ್ಹ ಉದ್ಯೋಗಾರ್ಥಿಗಳು ವಯಸ್ಸು, ವಿದ್ಯಾರ್ಹತೆ ಮತ್ತು ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಸಹಿತ ಏಪ್ರಿಲ್ 3ರಂದು ಬೆಳಗ್ಗೆ 11 ಕ್ಕೆ ಮೀನುಗಾರಿಕೆ ಉಪನಿರ್ದೇಶಕರು, ಕಾಸರಗೋಡು, ಮೀನಾಪೀಸ್, ಕಾಞಂಗಾಡ್ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಮಾಹಿತಿಗೆ 0467 2202537 ಸಂಪರ್ಕಿಸಲು ಸೂಚಿಸಲಾಗಿದೆ.