ನವದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಲಂಡನ್ ಪ್ರವಾಸದ ಸಂದರ್ಭದಲ್ಲಿ ನಡೆದ ಭದ್ರತಾ ಉಲ್ಲಂಘನೆಯ ಘಟನೆಯನ್ನು ಭಾರತ ಗುರುವಾರ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ' ಜೈಶಂಕರ್ ಅವರ ಭದ್ರತೆ ಉಲ್ಲಂಘನೆಯಾದ ಬಗ್ಗೆ ನಮ್ಮ ಬಳಿ ವಿಡಿಯೊ ದೃಶ್ಯಗಳಿವೆ.
ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಈ ಸಣ್ಣ ಗುಂಪಿನ ಪ್ರಚೋದನಕಾರಿ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ' ಎಂದಿದ್ದಾರೆ.
'ಇಂತಹ ಸಂದರ್ಭಗಳಲ್ಲಿ ಆತಿಥೇಯ ಸರ್ಕಾರವು ತಮ್ಮ ರಾಜತಾಂತ್ರಿಕ ಬಾಧ್ಯತೆಗಳನ್ನು ಪೂರೈಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ' ಎಂದು ಹೇಳಿದ್ದಾರೆ.