ವಯನಾಡ್: ಪೊಲೀಸ್ ಜೀಪೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಓರ್ವ ಬೀದಿ ಬದಿ ವ್ಯಾಪಾರಿ ಸಾವಿಗೀಡಾಗಿದ್ದು, ಮೂವರು ಪೊಲೀಸರು ಸೇರಿ 4 ಮಂದಿ ಗಾಯಗೊಂಡಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ವಲ್ಲಿಯೂರ್‌ಕಾವು ಎಂಬಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.65 ವರ್ಷದ ಶ್ರೀಧರನ್ ಮೃತ ದುರ್ದೈವಿ.
ಸಂಜೆ ಸುಮಾರು 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಆರೋಪಿಯನ್ನು ಕಣ್ಣೂರಿನಿಂದ ಸುಲ್ತಾನ್ ಬತ್ತೇರಿಗೆ ಜೀಪ್‌ನಲ್ಲಿ ಕರೆದುಕೊಂಡು ಹೋಗುವಾಗ ಪಲ್ಟಿಯಾಗಿದೆ.
ರಸ್ತೆಯಲ್ಲಿ ಸ್ಕಿಡ್ ಆಗಿ ಜೀಪ್ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಶ್ರೀಧರನ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಜೀಪ್‌ನಲ್ಲಿದ್ದ ಆರೋಪಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ.
ವ್ಯಾಪಾರಿಯ ಮೃತದೇಹವನ್ನು ಮಾನಂದವಾಡಿಯ ಮೆಡಿಕಲ್ ಕಾಲೇಜಿನ ಶವಾಗಾರಕ್ಕೆ ಸಾಗಿಸಲಾಗಿದೆ.