ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಹಿನ್ನೆಲೆಯಲ್ಲಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ಉಳಿಯತ್ತಡ್ಕದ ಮೂಲಸ್ಥಾನದಿಂದ ಆರಂಭಗೊಂಡು ಮಧೂರು ಕ್ಷೇತ್ರದ ವರೆಗೆ ನಡೆಯಿತು.
ಬೃಹತ್ ಶೋಭಾಯಾತ್ರೆಯೊಂದಿಗೆ ನಡೆದ ಹಸಿರುವಾಣಿ ಸಮರ್ಪಣಾ ಮೆರವಣಿಗೆಯಲ್ಲಿ ಮಹಿಳೆಯರು ಹಾಗೂ ಮಕ್ಕಳಿಂದ ಕುಣಿತ ಭಜನೆ, ಸಿಂಗಾರಿ ಮೇಳ, ಬ್ಯಾಂಡ್ ಮೇಳ, ಸಮವಸ್ತ್ರಧಾರಿ ಮಹಿಳೆಯರ ತಂಡ ಪಾಲ್ಗೊಳ್ಳುವ ಮೂಲಕ ಮೆರವಣಿಗೆ ರಂಗೇರಿತ್ತು. ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು. ವಿವಿಧ ಕೇದ್ರಗಳಿಂದ ಆಗಮಿಸಿದ ಹಸಿರುವಾಣಿ ಮೆರವಣಿಗೆ ಮೂಲಸ್ಥಾನದಿಂದ ಒಟ್ಟಾಗಿ ದೇವಸ್ಥಾನಕ್ಕೆ ತಲುಪಿತು.