ಬದಿಯಡ್ಕ: ಸೂಪರ್ ಸ್ಪೆಷಾಲಿಟಿ ಉಚಿತ ವೈದ್ಯಕೀಯ ಶಿಬಿರ ಮಾ. 8 ರಂದುಬೆಳಗ್ಗೆ 10ರಿಂದ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿರುವುದು. ಬೆಳಗ್ಗೆ 9ರಿಂದ 11.30ರ ವರೆಗೆ ನೋಂದಾವಣೆ ನಡೆಯಲಿದೆ.
ಐಸಿಸಿ ಆಟ್ರ್ಸ್ ಏಂಡ್ ಸ್ಪೋಟ್ರ್ಸ್ ಕ್ಲಬ್ ನೀರ್ಚಾಲ್, ಯಂಗ್ ಫ್ರೆಂಡ್ಸ್ ನೀರ್ಚಾಲ್ ಹಾಗೂ ಮಂಗಳೂರಿನ ಕೆಎಂಸಿ ಅತ್ತಾವರ ಸಹಯೋಗದೊಂದಿಗೆ ಶಿಬಿರ ನಡೆಯಲಿರುವುದು. ಇಎನ್‍ಟಿ, ಜನರಲ್, ಬೆನ್ನುಮೂಳೆ, ಕಣ್ಣಿನ ತಪಾಸಣೆ, ಮಕ್ಕಳ ವಿಭಾಗ, ಕಿಡ್ನಿ ಮತ್ತು ಮೂತ್ರ ರೋಗದ ಬಗ್ಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಯುವುದು. ಶಿಬಿರದಲ್ಲಿ ಇಸಿಜಿ, ರಕ್ತ ತಪಾಸಣೆ, ಉಚಿತ ಔಷದ ವಿತರಣೆ ನಡೆಯುವುದು.
ಇದೇ ಸಂದರ್ಭ 35ಸಾವಿರ ರೂ. ವರೆಗೆ ಅರೋಗ್ಯ ವಿಮಾ ಲಭ್ಯತೆಗಾಗಿರುವ ಕೆಎಂಸಿ ಲಾಯಲ್ಟಿ ಕಾರ್ಡು ಒದಗಿಸಲು ನೋಂದವಣಾ ಶಿಬಿರವೂ ನಡೆಯುವುದು. ಒಂದು ಕುಟುಂಬದ ಐದು ಮಂದಿ ವರೆಗೆ ನೋಂದವಣೆಗೆ 400ರೂ. ಶುಲ್ಕವಿದ್ದು, ಕುಟುಂಬದ ರೇಶನ್‍ಕಾರ್ಡಿನ ಜೆರಾಕ್ಸ್ ಪ್ರತಿ ಅಥವಾ ಆಧಾರ್ ಕಾರ್ಡು ಪ್ರತಿ ಒದಗಿಸುವಂತೆ ಪ್ರಕಟಣೆ ತಿಳಿಸಿದೆ.