ಕಾಸರಗೋಡು : ನಗರಸಭೆಯ 4ನೇ ವಾರ್ಡಿನಲ್ಲಿ ಖಾಲಿ ಇರುವ ಆಶಾ ಕಾರ್ಯಕರ್ತೆಯರ ಹುದ್ದೆಗೆ ನೇಮಕಾತಿ ನಡೆಸಲಾಗುವುದು. ಎಸ್ಸೆಸೆಲ್ಸಿ ಶಿಕ್ಷಣ ಯೋಗ್ಯತೆಯಾಗಿದ್ದು, ವಯೋಮಿತಿ 45 ವರ್ಷ ಆಗಿದೆ. ಆಯಾ ವಾರ್ಡ್‍ನ ಕಾಯಂ ನಿವಾಸಿಗಳಾಗಿರುವ ವಿವಾಹಿತರು, ವಿವಾಹ ವಿಚ್ಛೇದಿತರು, ವಿಧವೆಯರು, ಅವಿವಾಹಿತ ತಾಯಂದಿರಾಗಿರಬೇಕು. ಆಸಕ್ತ ಉದ್ಯೋಗಾರ್ಥಿಗಳು ವಯಸ್ಸು ಸಾಬೀತು ಪಡಿಸುವ ದಾಖಲೆಗಳು, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ಶಾಶ್ವತ ವಾಸ್ತವ್ಯದ ದಾಖಲೆಗಳು, ಅನುಭವ ಪ್ರಮಾಣಪತ್ರಗಳು ಹಾಗೂ ಬಿಳಿ ಕಾಗದದ ಮೇಲೆ ಸ್ವಯಂ ಸಿದ್ಧಪಡಿಸಿದ ಅರ್ಜಿ ಸಹಿತ ಮಾ. 28ರಂದು ಸಂಜೆ 3 ಗಂಟೆಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230080) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.