ಮಧೂರು : ಮಧೂರು ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗಿರುವ ಮದರು ಮಹಾಮಾತೆ ಹೆಸರಲ್ಲಿ ಮೂಲಸ್ಥಾನದಲ್ಲಿ ನಿರ್ಮಾಣಗೊಂಡಿರುವ ಮಹಾದ್ವಾರ ಸಾಮರಸ್ಯದ ಸಂಕೇತದ ಜತೆಗೆ ಶಕ್ತಿಕೇಂದ್ರವಾಗಿ ಬೆಳಗಲಿ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾರೈಸಿದರು.
ಅವರು ಮದರು ಮಹಾಮಾತೆ ಮೊಗೇರ ಸಂಘ ವತಿಯಿಂದ ಉಳಿಯತ್ತಡ್ಕದ ಮೂಲಸ್ಥಾನದಲ್ಲಿ ನಿರ್ಮಿಸಿರುವ ಮಹಾದ್ವಾರ ಲೋಕಾರ್ಪಣೆಗೈದು ಆಶೀರ್ವಚನ ನೀಡಿದರು. ಮೂಲಸ್ಥಾನದಲ್ಲಿ ಮತ್ತಷ್ಟು ಅಭಿವ್ರದ್ಧಿಕಾರ್ಯಗಳು ನಡೆಯಬೇಕಾಗಿದ್ದು, ಇದಕ್ಕೆ ಮೊಗೇರ ಸಮುದಾಯದ ಜೊತೆಗೆ ಇತರ ಎಲ್ಲಾ ಜನತೆ ಕೈಜೋಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಂಘದ ಅದ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಆನಂದ ಮವ್ವಾರ್, ಕೃಷ್ಣಾನಂದ ದರ್ಬೆ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಉಪಾಧ್ಯಕ್ಷ ಗಿರೀಶ್ ಸಂಧ್ಯಾ, ರಾಮಪ್ಪ ಮಂಜೇಶ್ವರ, ಕೃಷ್ಣದಾಸ್, ಸುಧಾಕರ ಬೆಳ್ಳಿಗೆ, ನಿಟ್ಟೋಣಿ ಬಂದ್ಯೋಡು, ಜಯಾರಾಮಪ್ಪ, ಸುರೇಶ್ ಅಜಕ್ಕೋಡ್, ಗಂಗಾಧರ ಗೋಳಿಯಡ್ಕ, ಸುಂದರ ಮಲ್ಲಂಗೈ, ಸುಂದರಿ ಮಾರ್ಪನಡ್ಕ, ಶಿಕ್ಷಕಿ ಸುನಂದಾ, ಪೂರ್ಣಿಮಾ ಮೊದಲಾದವರು ಉಪಸ್ಥಿತರಿದ್ದರು. ಶಂಕರ ದರ್ಬೆತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.