ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿಯಡ್ಕ ವಲಯದ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದರ ಹಾಗೂ ಬ್ರಹ್ಮಕಲಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 2 ಲಕ್ಷ ಮೊತ್ತದ ಡಿ.ಡಿ.ಯನ್ನು ಇತ್ತೀಚೆಗೆ ವಿತರಿಸಲಾಯಿತು.
ಹಿರಿಯರಾದ ಸಂಜೀವ ಶೆಟ್ಟಿ ಮೊಟ್ಟಕುಂಜ, ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ, ವಲಯದ ಮೇಲ್ವಿಚಾರಕ ಗೋಪಾಲಕೃಷ್ಣ, ಹರೀಶ್ ಗೋಸಾಡ, ಜಯರಾಮ ಪಾಟಾಳಿ, ಸುಧಾಕರ್, ಸುಬ್ರಮಣ್ಯ ಭಟ್, ಬಾಲಕೃಷ್ಣ, ಸೀತಾರಾಮ, ಹರಿನಾರಾಯಣ, ಸಂತೋಷ ಕುಮಾರ್ ಗಾಡಿಗುಡ್ಡೆ,ಗೋಪಾಲಕೃಷ್ಣ ಮುಂಡೋಳುಮೂಲೆ. ಉದಯ ನಾರಂಪಾಡಿ,ಸತ್ಯನಾರಾಯಣ ಭಟ್, ದಯಾನಂದ, ದೇವರಾಜ್ ರೈ, ರಮೇಶಕೃಷ್ಣ. ಉಪಸ್ಥಿತರಿದ್ದರು.