ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಅಂಗವಾಗಿ ಮೊಗ್ರಾಲ್ ಪುತ್ತೂರು ಪ್ರಾದೇಶಿಕ ಸಮಿತಿಯ ವತಿಯಿಂದ ಹಸಿರುವಾಣಿ ಹೊರೆ ಕಾಣಿಕೆ ದೇವಾಲಯಕ್ಕೆ ಸಮರ್ಪಿಸಲಾಯಿತು.
ಕಾವುಗೋಳಿ ಶಿವಕ್ಷೇತ್ರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಪ್ರಕಾಶ ಪಟ್ಟೇರಿ ಅವರು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಅತ್ಯಾಕರ್ಷಕ ಮೆರವಣಿಗೆಗೆ,ವರ್ಣ ರಂಜಿತ ಮುತ್ತು ಕೊಡೆಗಳ ಮಹಿಳಾ ಸಮವಸ್ತ್ರಧಾರಿಗಳು, ನಾಸಿಕ್ ಬಾಂಡ್, ತಾಂಬೋಲ ಮೇಳಗಳು ,ಭಜನಾ ಸಂಕೀರ್ತನಾ ತಂಡಗಳು, ಕುಣಿತ ಭಜನಾ ತಂಡಗಳು, ಭಾರತಮಾತೆ, ಶಿವ ಪರಿವಾರ, ಯಕ್ಷಗಾನ, ಭರತನಾಟ್ಯ, ಮೋಹಿನಿಯಾಟಂ ವೇಷಧಾರಿಗಳು ವಿವಿಧ ಸಂಘ ಸಂಸ್ಥೆಗಳ ಸಮವಸ್ತ್ರ ಧರಿಸಿದ ಮಹಿಳೆಯರು, ಸಮವಸ್ತ್ರಧಾರಿ ಮಹನೀಯರು ಪಾಲ್ಗೊಂಡಿದ್ದರು.