ಕುಂಬಳೆ : ಕುಂಬಳೆ ನಿವಾಸಿ, ಕುಂಬಳೆ ಬಸ್ ನಿಲ್ದಾಣ ವಠಾರದಲ್ಲಿ ಹೋಟೆಲ್ ನಡೆಸುತ್ತಿದ್ದ ಪಬ್ಬಣ್ಣ ಎಂದೇ ಪರಿಚಿತರಾಗಿರುವ ಪ್ರಭಾಕರ(63)ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅಸೌಖ್ಯದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೆಸ್ಸೆಸ್‍ನ ಹಿರಿಯ ಸ್ವಯಂಸೇವಕರಾಗಿದ್ದ ಇವರು ಹೋಟೆಲ್ ಉದ್ಯಮಿಯಾಗಿದ್ದರು. ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯ ನಿರ್ವಹಣೆ ನಡೆಸುತ್ತಿದ್ದರು. ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.