ಬದಿಯಡ್ಕ: ನಡುಮೂಲೆ ಶ್ರೀ ಪೊಟ್ಟನ್ ದೈವದ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆ ವಿವಿಧ ಕಾರ್ಯಕ್ರಮಗಳೊದಿಗೆ ಮಾ.26 ಹಾಗೂ 27ರಂದು ನಡುಮೂಲೆ ಶ್ರೀ ಪೊಟ್ಟನ್ ದೈವಸ್ಥಾನದಲ್ಲಿ ನಡೆಯಲಿದೆ.
ಇದರಂಗವಾಗಿ ಮಾ.26ರಂದು ರಾತ್ರಿ 7ಕ್ಕೆ ಉಬ್ರಂಗಳ ಐವರ್ ವಿಷ್ಣುಮೂರ್ತಿ ಚಾಮುಂಡಿ ದೈವಸ್ಥಾನದಿಂದ ಭಂಡಾರ ಆಗಮಿಸುವುದು, ರಾತ್ರಿ 8.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ರಾತ್ರಿ 9ಕ್ಕೆ ಪೊಟ್ಟನ್‍ದೈವದ ತೊಡಂಲ್, ರಾತ್ರಿ ಪ್ರಸಾದ ಭೋಜನ ನಡೆಯಲಿದೆ.
ಮಾ.27ರಂದು ಮುಂಜಾನೆ 3ಕ್ಕೆ ಪೊಟ್ಟನ್‍ದೈವದ ನೃತ್ಯ, ಪ್ರಸಾದ ವಿತರಣೆ, 9.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ನೃತ್ಯ, ಪ್ರಸಾದ ವಿತರಣೆ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳುವುದು.