ಜಮ್ಮು: ಕಾಶ್ಮೀರದಲ್ಲಿ ವಿಭಜನೆಗೊಂಡ ಪ್ರದೇಶಗಳ ನಡುವೆ ಹೋಲಿಕೆ ಬೇಡ. ಪಾಕಿಸ್ತಾನಕ್ಕೆ ಚೀನಾ ಪ್ರಚೋದನೆ ನೀಡುವ ಹೊರತಾಗಿಯೂ ಪಾಕ್ ಆಕ್ರಮಿತ ಪ್ರದೇಶದಲ್ಲಿ (ಪಿಒಕೆ) ಪರಿಸ್ಥಿತಿ ಕೆಟ್ಟದಾಗಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದರು.
ಪಿಒಕೆ ಅಭಿವೃದ್ಧಿ ವಿಚಾರವಾಗಿ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಬಿಜೆಪಿ ಶಾಸಕರ ಮಧ್ಯೆ ವಾಗ್ವಾದ ನಡೆದ ನಂತರ ಅವರು ಈ ಹೇಳಿಕೆ ನೀಡಿದರು.
ಜಮ್ಮು ಮತ್ತು ಕಾಶ್ಮೀರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ರಸ್ತೆ ನಿರ್ಮಾಣಕ್ಕಾಗಿ ನಾವು ಚೀನಾ, ಅಮೆರಿಕ, ಇಂಗ್ಲೆಂಡ್ ಅಥವಾ ಫ್ರಾನ್ಸ್‌ನಿಂದ ಎಂದೂ ನೆರವು ಕೇಳಿಲ್ಲ ಎಂದು ಹೇಳಿದರು.
ಕೇವಲ ತೋರಿಕೆಗಾಗಿ ಪಿಒಕೆಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಗಡಿಯಾದ್ಯಂತ ಏನೆಲ್ಲಾ ಬೆಳವಣಿಗೆ ಆಗಿದೆಯೋ ಅದಕ್ಕೆ ಚೀನಾ ಕೃಪಾಕಟಾಕ್ಷ ಕಾರಣ ಎಂದರು.