ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆ ಆರಂಭದ ದಿನದಂದು ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಬಂದು ಸೇರಿದ್ದರು. ವಾಹನಗಳ ನಿಯಂತ್ರಣ, ಶುಚಿತ್ವ, ಆಹಾರ ಬಡಿಸುವಿಕೆ, ಪೂಜಾ ಸುವಸ್ತುಗಳ ಪೂರೈಕೆ, ಆಹಾರ ಪದಾರ್ಥ ಬಡಿಸುವಿಕೆ ಸೇರಿದಂತೆ ನಾನಾ ಕೆಲಸಕಾರ್ಯಗಳಲ್ಲಿ ಕಾರ್ಯಕರ್ತರ ತಂಡಗಳು ಸಕ್ರಿಯವಾಗಿ ತೊಡಗಿಸಿಕೊಂಡರು.
ಒಟ್ಟು ನಾಲ್ಕು ವೇದಿಕೆಗಳಲ್ಲಿ ದಿನ ಪೂರ್ತಿ ಕಾರ್ಯಕ್ರಮ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಬ್ರಹ್ಮಕಲಶೋತ್ಸವ ಸಮಾರಂಭವೊಂದರಲ್ಲಿ ಯಕ್ಷಗಾನಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದ್ದು, ಇಲ್ಲಿ ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ ಪ್ರತಿ ದಿನ ನಡೆಯುತ್ತಿದೆ. ಮಹಿಳೆಯರ ಸಹಿತ ನೂರಾರು ಮಂದಿ ಸ್ವಯಂಸೇವಕರು ದೇವಸ್ಥಾನದಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ.