ಕಾಸರಗೋಡು: ಕಣ್ಣೂರು ವಿಶ್ವವಿದ್ಯಾಲಯದ ಡಿಪಾರ್ಟ್‍ಮೆಂಟ್ ಆಫ್ ಕಾಮರ್ಸ್ ಆ್ಯಂಡ್ ಬಿಸಿನಸ್ ಸ್ಟಡೀಸ್ ಇಂಟರ್‍ವೆನ್ಶನ್ ಆಫ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ ಕಾಮರ್ಸ್ ಆ್ಯಂಡ್ ಬಿಸಿನಸ್ ಎಂಬ ವಿಷಯದಲ್ಲಿ ಮೂರು ದಿನಗಳ ರಾಷ್ಟ್ರೀಯ ವಿಚಾರಸಂಕಿರಣ ಆರಂಭಗೊಂಡಿತು.
ಕಣ್ಣೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ವಿಚಾರಗೋಷ್ಠಿ ಉದ್ಘಾಟಿಸಿದರು. ಪ್ರೊ.ಡಾ. ಸಜಿ ಟಿ.ಜಿ. ಮುಖ್ಯ ಭಾಷಣ ನಡೆಸಿದರು. ಕೋರ್ಸ್ ನಿರ್ದೇಶಕ ಅನಿ ಅಧ್ಯಕ್ಷತೆ ವಹಿಸಿದರು. ಅಂಜನ ನಾರಾಯಣನ್ ಸ್ವಾಗತಿಸಿದರು. ಡಾ.ಮಿನಿಮೋಲ್ ಸಿ, ಪ್ರೊ.ಡಾ.ರಿಜ ವಿ, ಡಾ.ಪ್ರೀತಿ ಕೆ, ರೇಷ್ಮಾ ರತ್ನಾಕರನ್, ಜಿಬಿನ್ ಜೋಸ್ ಮಾತನಾಡಿದರು.