ಕಾಸರಗೋಡು: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ನಡೆಸಿದ ಕಬ್ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ರಾಜ್ಯ ಮಟ್ಟದ ಕಬ್ ವಿಭಾಗದ ಚತುರ್ಥಚರಣ ಪದಕಕ್ಕೆ ಕೂಡ್ಲು ಗೋಪಾಲಕೃಷ್ಣ ಪ್ರೌಢಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್ ಕೂಡ್ಲು ಅರ್ಹತೆ ಗಳಿಸಿದ್ದಾನೆ.
ಈತ ಕಳೆದ ಮೂರು ವರ್ಷಗಳಿಂದ ಕಬ್ ವಿಭಾಗದಲ್ಲಿ ತರಬೇತಿ ಪಡೆಯುತಿದ್ದ. ಜಿಂಖಾನ ಓಪನ್ ಕಬ್ ಪೇಕ್ ನ ಸದಸ್ಯನಾದ ಈತನಿಗೆ ಕಬ್ ಅಧ್ಯಾಪಕ ಭುವನೇಂದ್ರ ನಾಯರ್ ಎ.ಎಲ್.ಟಿ ಕಬ್ ತರಬೇತಿ ನೀಡಿದರು. ಈತ ಕಳೆದ ವರ್ಷ ಹರ್ಯಾಣದ ಗಡ್‍ಪುರಿಯಲ್ಲಿ ಜರಗಿದ ರಾಷ್ಟ್ರಮಟ್ಟದ ಕಬ್ ಬುಲ್‍ಬುಲ್ ಉತ್ಸವದಲ್ಲಿ ಭಾಗವಹಿಸಿದ್ದಾನೆ.