ಹೈದರಾಬಾದ್: ತೆಲಂಗಾಣದ ಶಾದನಗರದ ವಿದ್ಯಾರ್ಥಿ ಗುಂಪ ಪ್ರವೀಣ್ ಎನ್ನುವವರು ಅಮೆರಿಕದಲ್ಲಿ ಬುಧವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರವೀಣ್ ಅವರು ಉನ್ನತ ವ್ಯಾಸಂಗಕ್ಕಾಗಿ 2023ರಲ್ಲಿ ಅಮೆರಿಕಕ್ಕೆ ಹೋಗಿದ್ದರು. ಅವರು ವಿದ್ಯಾರ್ಥಿಯಾಗಿದ್ದುಕೊಂಡೇ ಅಲ್ಪಾವಧಿ ಕೆಲಸವನ್ನೂ ಮಾಡುತ್ತಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ.
'ಮಧ್ಯರಾತ್ರಿ ಕರೆಯೊಂದು ಬಂದಾಗ ನಾವು ಸ್ವೀಕರಿಸಲಿಲ್ಲ. ಬೆಳಿಗ್ಗೆ ಆ ಸಂಖ್ಯೆಗೆ ತಿರುಗಿ ಕರೆ ಮಾಡಿದಾಗ, ಅವರು ಪ್ರವೀಣ್‌ನ ವಿವರಗಳನ್ನು ಕೇಳಿದರು. ಇದು ವಂಚನೆಯ ಕರೆ ಇರಬಹುದು ಎಂದುಕೊಂಡೆವು. ಆದರೆ ನಂತರ ಆತನ ಸ್ನೇಹಿತರಿಗೆ ಕರೆ ಮಾಡಿದಾಗ, ಅವರು ಪ್ರವೀಣ್ ಎಲ್ಲಿದ್ದಾನೆ ಗೊತ್ತಿಲ್ಲ ಎಂದರು. ನಂತರ, ಪ್ರವೀಣ್‌ನನ್ನು ಗುಂಡಿಕ್ಕಿ ಸಾಯಿಸಿರುವುದು ಅವರಿಗೆ ಗೊತ್ತಾಗಿದೆ' ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.