ಚೆನ್ನೈ: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಶಾಲೆಯಲ್ಲಿ ಹಿಂದಿ ಕಲಿತಿದ್ದಾರೊ, ಇಲ್ಲವೊ ಎಂಬ ಕುರಿತ ಚರ್ಚೆ ತಮಿಳುನಾಡಿನಲ್ಲಿ ಆರಂಭವಾಗಿದ್ದು, ಈ ಮೂಲಕ ರಾಜಕಾರಣಿಗಳು ಅವರನ್ನು ತ್ರಿಭಾಷಾ ಸೂತ್ರದ ವಿವಾದಕ್ಕೆ ಎಳೆದು ತಂದಿದ್ದಾರೆ.
ತಮಿಳುನಾಡಿನ ಪಿಚೈ ಮೂಲದವರಾದ ಅವರು, ಜವಾಹರ ವಿದ್ಯಾಲಯ ಮತ್ತು ವನ ವಾನಿ ಮ್ಯಟ್ರಿಕ್ಯುಲೇಷನ್ ಹೈಯರ್ ಸೆಕೆಂಡರ್ ಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದು, ಖರಗ್‌ಪುರ ಐಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ.