ನವದೆಹಲಿ: ನ್ಯಾಯಾಲಯಗಳು ತಮ್ಮ ವ್ಯಾಪ್ತಿಯನ್ನು ಮೀರುತ್ತಿ ರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿ ಸಿರುವ ಸುಪ್ರೀಂ ಕೋರ್ಟ್, ವ್ಯಕ್ತಿಯೊಬ್ಬ ನನ್ನು ತಪ್ಪಾಗಿ ಬಂಧಿಸಿದ್ದರ ಆರೋಪದ ಅಡಿಯಲ್ಲಿ ಅವರಿಗೆ ಪರಿಹಾರ ರೂಪದಲ್ಲಿ ₹5 ಲಕ್ಷ ನೀಡುವಂತೆ ಮಾದಕ ವಸ್ತುಗಳ ನಿಯಂತ್ರಣ ಬ್ಯೂರೊದ (ಎನ್‌ಸಿಬಿ) ನಿರ್ದೇಶಕರಿಗೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವನ್ನು ರದ್ದುಪಡಿಸಿದೆ.
ಕಾನೂನಿನ ಅಡಿಯಲ್ಲಿ ಅಧಿಕಾರ ಇಲ್ಲದಿದ್ದರೂ ಈ ಪರಿಹಾರಕ್ಕೆ ಆದೇಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ಗಳಾದ ಸಂಜಯ್ ಕರೋಲ್ ಮತ್ತು ಮನಮೋಹನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠದ ಆದೇಶವನ್ನು ಪ್ರಶ್ನಿಸಿ ಎನ್‌ಸಿಬಿ, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮಾನ್ ಸಿಂಗ್ ವರ್ಮ ಮತ್ತು ಅಮನ್ ಸಿಂಗ್ ಎನ್ನುವವರಿಂದ ಎನ್‌ಸಿಬಿ ಅಧಿಕಾರಿಗಳು 1,280 ಗ್ರಾಂ ಬ್ರೌನ್ ಪೌಡರ್ ವಶಪಡಿಸಿಕೊಂಡಿದ್ದರು. ವರ್ಮ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಯೋಗಾಲಯದ ವರದಿ ಬರುವುದು ಬಾಕಿ ಇದ್ದಾಗ ಆರೋಪಿ ವರ್ಮ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ತಿರಸ್ಕೃತ ಗೊಂಡಿತು. ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಶಪಡಿಸಿಕೊಂಡ ವಸ್ತು ಮಾದಕ ಪದಾರ್ಥ ಅಲ್ಲ ಎಂದು ಪ್ರಯೋಗಾಲಯದ ವರದಿ ಹೇಳಿತು.
ನಂತರ ಆ ಮಾದರಿಯನ್ನು ಹೆಚ್ಚಿನ ಪರಿಶೀಲನೆಗೆ ಕೇಂದ್ರೀಯ ಪ್ರಯೋಗಾಲ ಯಕ್ಕೆ ರವಾನಿಸಲಾಗಿತ್ತು. ಅದು ಕೂಡ, ವಶಪಡಿಸಿಕೊಂಡ ವಸ್ತು ಮಾದಕ ಪದಾರ್ಥ ಅಲ್ಲ ಎಂದು ಹೇಳಿತು. ಇದಾದ ನಂತರ ಎನ್‌ಸಿಬಿ ಪ್ರಕರಣವನ್ನು ಕೊನೆಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತು, ವರ್ಮ ಅವರನ್ನು ಬಿಡುಗಡೆ ಮಾಡಲಾಯಿತು.
ವರ್ಮ ಅವರ ಬಿಡುಗಡೆ ಆಗಿದ್ದರೂ, ಎನ್‌ಸಿಬಿ ಅಧಿಕಾರಿಗಳು ಪ್ರಕರಣ ಕೊನೆಗೊಳಿಸಿದ್ದರೂ ಜಾಮೀನು ಅರ್ಜಿಯ ವಿಚಾರಣೆ ಮುಂದುವರಿಸಿದ ಹೈಕೋರ್ಟ್, ಪ್ರಯೋಗಾಲಯದ ಆರಂಭಿಕ ವರದಿ ಇದ್ದರೂ ವರ್ಮ ಅವರನ್ನು ತಪ್ಪಾಗಿ ಜೈಲುಪಾಲು ಮಾಡಲಾಗಿತ್ತು ಎಂದು ಹೇಳಿತು. ಹೀಗಾಗಿ ಎನ್‌ಸಿಬಿ ನಿರ್ದೇಶಕರು ಪರಿಹಾರ ನೀಡಬೇಕು ಎಂದು ಅದು ಹೇಳಿತು.